ಹುಬ್ಬಳ್ಳಿ:ನಗರದಲ್ಲಿ ಗಾಂಜಾ ಬೇಟೆ ಮುಂದುವರೆದಿದ್ದು, ಶಹರ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ರಾಜಸ್ಥಾನ ಜೋಧಪುರ ಮೂಲದ ಹುಬ್ಬಳ್ಳಿ ಘಂಟಿಕೇರಿ ಸಿಂದಗಿ ನಿವಾಸಿ ಸುಮೇರಸಿಂಗ್ ಮದನಸಿಂಗ್ ರಜಪೂತ ಮತ್ತು ಆಜಾದ ಕಾಲೋನಿ ನಿವಾಸಿ ಸಮುಂದರ್ ಸಿಂಗ್ ನೇಪಾಲಸಿಂಗ್ ರಜಪೂತ ಬಂಧಿತ ಆರೋಪಿಗಳು.
ಇದರಲ್ಲಿ ಸುಮೇರಸಿಂಗ್ ಭೋಜನಾಲಯದಲ್ಲಿ ಕೆಲಸ ಮಾಡುತ್ತಿದ್ದು, ಇನ್ನೋರ್ವ ಎಲೆಕ್ಟ್ರೀಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೆಲಸ ಮಾಡುತ್ತಲೇ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಆರು ಕೆಜಿ ಗಾಂಜಾ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.