ಹುಬ್ಬಳ್ಳಿ:ಕಂಟೇನರ್ ಲಾರಿ ಹರಿದ ಪರಿಣಾಮ 7 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದ ಬಳಿಯಲ್ಲಿ ನಡೆದಿದೆ.
7 ವರ್ಷದ ಬಾಲಕನ ಮೇಲೆ ಹರಿದ ಕಂಟೇನರ್ .. ಸ್ಥಳದಲ್ಲೇ ಬಾಲಕ ಸಾವು - ಹುಬ್ಬಳ್ಳಿಯಲ್ಲಿ ಕಂಟೇನರ್ ಆರಿ ಸೈಕಲ್ ಅಪಘಾತ
ಕಂಟೇನರ್ ಲಾರಿ ಹರಿದ ಪರಿಣಾಮ 7 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದ ಬಳಿಯಲ್ಲಿ ನಡೆದಿದೆ.
ಬಾಲಕ ಸಾವು
ಹಳೆಹುಬ್ಬಳ್ಳಿ ವೀರೇಶ ಹಿರೇಮಠ್ (7) ಎಂಬ ಬಾಲಕ ತಂದೆಯೊಂದಿಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದ ಸಂದರ್ಭದಲ್ಲಿ ಕಂಟೇನರ್ ಬಾಲಕನ ಮೇಲೆ ಹರಿದಿದೆ. ಇದರ ಪರಿಣಾಮ ಬಾಲಕನ ದೇಹ ಛಿದ್ರ- ಛಿದ್ರವಾಗಿದೆ. ಬಾಲಕನ ಕಾಲುಗಳನ್ನು ಹೊರತುಪಡಿಸಿ ಮುಖ ಹಾಗೂ ದೇಹದ ಮೇಲೆ ಲಾರಿ ಗಾಲಿ ಹರಿದ ಪರಿಣಾಮ ಬಾಲಕನ ದೇಹ ನೆಲಕ್ಕೆ ಅಪ್ಪಚ್ಚಿಯಾಗಿದೆ.
ಆಧಾರ್ ಕಾರ್ಡ್ ಮಾಡಿಸಲು ತನ್ನ ತಂದೆಯ ಜೊತೆಗೆ ಸೈಕಲ್ನಲ್ಲಿ ಬಂದಿದ್ದ ಎನ್ನಲಾಗಿದೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jan 1, 2020, 7:13 PM IST