ಧಾರವಾಡ:ಸರಣಿ ಅಪಘಾತ ಸಂಭವಿಸಿದ ಪರಿಣಾಮ ಏಳು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಡ್ರೈವರ್ ಲಕ್ಷ್ಮಣ್ಗೌಡ್ (35) ಮೃತಪಟ್ಟಿದ್ದಾರೆ. ಮೃತರನ್ನು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಸರಣಿ ಅಪಘಾತ: ಓರ್ವ ಸಾವು, ಏಳು ಜನರಿಗೆ ಗಾಯ - ಧಾರವಾಡದಲ್ಲ ಸರಣಿ ಅಪಘಾತ, ಏಳು ಜನರಿಗೆ ಗಾಯ
ಧಾರವಾಡ ಹೊರವಲಯದಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಏಳು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.
![ಸರಣಿ ಅಪಘಾತ: ಓರ್ವ ಸಾವು, ಏಳು ಜನರಿಗೆ ಗಾಯ seven-people-injured-in-road-accident-in-dharvada](https://etvbharatimages.akamaized.net/etvbharat/prod-images/768-512-5704398-thumbnail-3x2-sanju---copy.jpg)
ಸರಣಿ ಅಪಘಾತ: ಏಳು ಜನರಿಗೆ ಗಾಯ
ಧಾರವಾಡ-ಬೆಳಗಾವಿ ರಸ್ತೆಯಲ್ಲಿ ಪೆಪ್ಸಿ ಕಾರ್ಖಾನೆ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಬಳಿಕ ಎದುರಿಗೆ ಬರುತ್ತಿದ್ದ ಟಾಟಾ ಏಸ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಬೈಕ್ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಬೆಳಗಾವಿ ಕಡೆಯಿಂದ ಕಾರು ಬರುತ್ತಿತ್ತು ಎನ್ನಲಾಗಿದ್ದು, ಅಪಘಾತದಲ್ಲಿ ಕಾರು ಪಲ್ಟಿಯಾಗಿದೆ. ಗಾಯಾಳುಗಳನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಧಾರವಾಡ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಸರಣಿ ಅಪಘಾತ: ಏಳು ಜನರಿಗೆ ಗಾಯ