ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಅಲ್ಲದೇ ಸರ್ಕಾರಿ ನೌಕರರು ಹಾಗೂ ಕೊರೊನಾ ವಾರಿಯರ್ಸ್ಗೂ ಸೋಂಕು ತಗುಲುತ್ತಿದೆ. ಆದ್ರೆ ಜಿಲ್ಲೆಯ ಸೋಂಕಿತರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸರ್ಕಾರಿ ಸಿಬ್ಬಂದಿಗೆ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ನಗರದ ಬಿ.ಡಿ.ಜತ್ತಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಈಗಾಗಲೇ ಹೆಲ್ತ್ ವರ್ಕರ್ಸ್ 5 ಜನ, ಜಿಲ್ಲಾ ಪಂಚಾಯತ್ನ ಒಬ್ಬರು, ಖಜಾನೆ ಇಲಾಖೆಯ ಒಬ್ಬರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಬ್ಬರು, ನೀರಾವರಿ ಇಲಾಖೆಯ ಒಬ್ಬರು ಹಾಗೂ ಪೊಲೀಸ್ ಇಲಾಖೆಯ 3 ಜನ ಸಿಬ್ಬಂದಿಗೆ ಸೋಂಕು ತಗುಲಿದೆ. ಇದರಿಂದ ಸೋಂಕಿತರು ಕಂಡು ಬಂದ ಸರ್ಕಾರಿ ಕಚೇರಿಗಳನ್ನು ಸಹ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಎರಡು ದಿನ ಸೀಲ್ ಡೌನ್ ಮಾಡಲಾಗುತ್ತಿದೆ.