ಕರ್ನಾಟಕ

karnataka

ETV Bharat / state

ಗ್ರಾಪಂ ಮತ ಎಣಿಕೆ: ಸಮಬಲ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ - Selected by lottery in sulla village panchayat

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯಿತಿಯ ವಾರ್ಡ್​ 5ರಲ್ಲಿ ತಲಾ 209 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

Selected by lottery in sulla village panchayat
ಸಮ ಮತ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ

By

Published : Dec 30, 2020, 10:33 PM IST

ಧಾರವಾಡ:ಕಲಘಟಗಿ ತಾಲೂಕಿನ ಕುರವಿನಕೋಪ್ಪ ಗ್ರಾಮದ ವಾರ್ಡ್ 2ರಲ್ಲಿ ತಲಾ 259 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ಶಾಂತವ್ವ ತಿಪ್ಪಣ್ಣ ರೇವಡಿಹಾಳ ಗೆಲುವು ಸಾಧಿಸಿದರೆ, ಪ್ರೇಮಾ ಶಿವಪ್ಪ ಅಂಗಡಿ ಸೋಲು ಅನುಭವಿಸಿದರು. ಈ ಇಬ್ಬರು ಅಭ್ಯರ್ಥಿಗಳು ಸಮನಾಗಿ ಮತ ಪಡೆದುಕೊಂಡ ಹಿನ್ನೆಲೆ ಲಾಟರಿ‌ ಮೂಲಕ ಆಯ್ಕೆ ಮಾಡಲಾಯಿತು.

ಸಮಬಲ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ

ಸಮ‌ಮತ ಪಡೆದ ಇಬ್ಬರು ಅಭ್ಯರ್ಥಿಗಳು, ಲಾಟರಿಯಲ್ಲಿ ಒಬ್ಬರಿಗೆ ಖುಲಾಯಿಸಿದ‌ ಜಯದ ಮಾಲೆ

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯಿತಿಯ ವಾರ್ಡ್​ 5ರಲ್ಲಿ ತಲಾ 209 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ಮಂಜುನಾಥ ನಿಂಗಪ್ಪ ನಾಯ್ಕರ ಗೆಲುವು ಸಾಧಿಸಿದರೆ, ಭೀಮಪ್ಪ ಶಿರಗಣ್ಣವರ ಸೋಲು ಅನುಭವಿಸಿದರು. ಈ ಇಬ್ಬರು ಅಭ್ಯರ್ಥಿಗಳು ಸಮವಾಗಿ ಮತ‌ ಪಡೆದ ಪರಿಣಾಮ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ABOUT THE AUTHOR

...view details