ಹುಬ್ಬಳ್ಳಿ :ಕೊರೊನಾದಂತಹ ಸಂದರ್ಭದಲ್ಲಿಯೂ ಕೂಡ ರೈತರು ಮುಂಗಾರು ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಬೀಜ, ಗೊಬ್ಬರದ ಬೆಲೆ ಗಗನಕ್ಕೆ ಏರಿದ್ದು ರೈತರು ಕಂಗಾಲಾಗಿದ್ದಾರೆ.
ಮುಂಗಾರು ಬಿತ್ತನೆಗೆ ಮುಂದಾದ ರೈತರು.. ಬೀಜ, ಗೊಬ್ಬರ ಬೆಲೆ ಬಲು ಜಾಸ್ತಿ..
ಕೊರೊನಾ ಎಫೆಕ್ಟ್ ಮುಂಗಾರು ಬಿತ್ತನೆ ಬೀಜಗಳ ಮೇಲೆ ಬಿದ್ದಂತಾಗಿದೆ. ಮೊದಲು ಬೀಜಗಳು ಬೆಲೆ 800 ರೂ. ಇತ್ತು. ಈಗ ಅದರ ಬೆಲೆ ದುಪ್ಪಟ್ಟು ಆಗಿದೆ. ಗೊಬ್ಬರ ಬೆಲೆಯು ಗಗನಕ್ಕೇರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೊಯಾಬೀನ್, ಹೆಸರು, ಅಲಸಂದಿ, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ. ಆದರೆ, ಕೊರೊನಾ ಎಫೆಕ್ಟ್ ಮುಂಗಾರು ಬಿತ್ತನೆ ಬೀಜಗಳ ಮೇಲೆ ಬಿದ್ದಂತಾಗಿದೆ. ಮೊದಲು ಬೀಜಗಳು ಬೆಲೆ 800 ರೂ. ಇತ್ತು. ಈಗ ಅದರ ಬೆಲೆ ದುಪ್ಪಟ್ಟು ಆಗಿದೆ. ಗೊಬ್ಬರ ಬೆಲೆಯು ಗಗನಕ್ಕೇರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
ರಾಜ್ಯ ಸರ್ಕಾರ ಬೀಜ, ಗೊಬ್ಬರ ಬೆಲೆಗಳನ್ನು ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ.