ಹುಬ್ಬಳ್ಳಿ:ವಾಣಿಜ್ಯನಗರಿಯಿಂದ ಜೋಧ್‌ಪುರಕ್ಕೆ ಎರಡನೇ ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲು ಪ್ರಯಾಣ ಬೆಳೆಸಿತು. ನಿನ್ನೆ 1,452 ಉತ್ತರ ಭಾರತದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಹೊತ್ತ ರೈಲು ತವರಿನತ್ತ ಸಂಚರಿಸಿತ್ತು.
ಹುಬ್ಬಳ್ಳಿಯಿಂದ ಜೋಧ್‌ಪುರಕ್ಕೆ ತೆರಳಿದ ಎರಡನೇ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು - Second Shramik Express from Hubli to Jodhpur
ಹುಬ್ಬಳ್ಳಿಯಿಂದ ರಾಜಸ್ಥಾನದ ಜೋಧ್‌ಪುರಕ್ಕೆ ಎರಡನೇ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಬೆಳೆಸಿತು.
ಮಧ್ಯಾಹ್ನ ಒಂದು ಗಂಟೆ ಸಮಾರಿಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ರೈಲು ಹೊರಡಲು ಅಣಿಯಾಗುತ್ತಿದಂತೆ ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು. ಅದರ ಜೊತೆಗೆ ಅಧಿಕಾರಿಗಳು ಹಾಗೂ ರೈಲು ಸಿಬ್ಬಂದಿ ಚಪ್ಪಾಳೆ ತಟ್ಟಿ ಪ್ರಯಾಣಿಕರನ್ನು ಬೀಳ್ಕೊಟ್ಟರು.
ಲಾಕ್‌ಡೌನ್‌ನಲ್ಲಿ ಸಿಲುಕಿ ಸ್ವಂತ ಊರುಗಳಿಗೆ ತೆರಳದೆ ಕಾರ್ಮಿಕರು, ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಹೀಗಾಗಿ ಎರಡನೇ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯಿಂದ ಮೀರಜ್, ಪುಣೆ, ವಡೋದರ, ಅಹಮದಾಬಾದ್, ಪಾಲನ್‌ಪುರ್ ಮಾರ್ಗವಾಗಿ ಜೋಧ್‌ಪುರ್ ತಲುಪಲಿದೆ. ಈ ರೈಲು ನಾಳೆ ಮಧ್ಯಾಹ್ನ 2:30ಕ್ಕೆ ಜೋಧ್‌ಪುರ ತಲುಪಲಿದೆ. ಪ್ರಯಾಣಿಕರ ತಪಾಸಣೆಗಾಗಿ ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.