ಕರ್ನಾಟಕ

karnataka

ETV Bharat / state

ಕುಂದಗೋಳ ಟೋಲ್​ಗೇಟ್​ ಸುಂಕಕ್ಕೆ ವಿರೋಧ: ಎರಡನೇ ಬಾರಿ ಬಂದ್​ಗೆ ಕರೆ - ಹುಬ್ಬಳ್ಳಿ ಸಮೀಪದ ಕುಂದಗೋಳ ಬಳಿ ಟೋಲ್​ ಗೇಟ್​​ ನಿರ್ಮಾಣ

ಹುಬ್ಬಳ್ಳಿ ಸಮೀಪದ ಕುಂದಗೋಳ ಬಳಿ ಟೋಲ್​ ಗೇಟ್​​ ನಿರ್ಮಾಣ ಮಾಡಲಾಗಿದ್ದು, ಈ ಟೋಲ್​ ಸುಂಕ ವಿರೋಧಿಸಿ ವಿವಿಧ ಸಂಘಟನೆಗಳು ಎರಡನೇ ಬಾರಿ ಬಂದ್​ಗೆ ಕರೆ ನೀಡಿವೆ

toll gate
ಕುಂದಗೋಳ ಬಳಿ ಇರುವ ಟೋಲ್​ ಗೇಟ್​​

By

Published : Dec 30, 2019, 12:08 PM IST


ಹುಬ್ಬಳ್ಳಿ: ಕುಂದಗೋಳ ಬಳಿಯ ಟೋಲ್‌ಗೇಟ್ ಸುಂಕ ಸಂಗ್ರಹ ವಿರೋಧಿಸಿ ಇಂದು ವಿವಿಧ ಸಂಘಟನೆಗಳು ಕುಂದಗೋಳ ಬಂದ್ ಗೆ ಕರೆ ನೀಡಿವೆ.‌

ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಅಂಗಡಿ ಮುಂಗಟ್ಟುಗಳು, ಬಸ್‌ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಅಲ್ಲದೇ ಕುಂದಗೋಳ ಪಟ್ಟಣದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕುಂದಗೋಳ ಬಳಿ ಇರುವ ಟೋಲ್​ ಗೇಟ್​​

ಇತ್ತೀಚೆಗಷ್ಟೆ ಟೋಲ್ ಗೇಟ್ ಸುಂಕ ವಿರೋಧಿಸಿ ನಾಲ್ಕು ಗಂಟೆಗಳ ರಸ್ತೆ ಬಂದ್ ಮಾಡಿ ವಿವಿದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಏಕಾ ಏಕಿ ಬಂದ್‌ಗೆ ಕರೆ ನೀಡಲಾಗಿದ್ದು, ಹುಬ್ಬಳ್ಳಿ - ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ72 ಸಂಪೂರ್ಣವಾಗಿ ಬಂದ್ ಆಗಿದೆ.

ABOUT THE AUTHOR

...view details