ಕರ್ನಾಟಕ

karnataka

ETV Bharat / state

ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಳ: ಧಾರವಾಡದಲ್ಲಿ ಮತ್ತೊಂದು ಲ್ಯಾಬ್​ ಸಿದ್ಧ - ಧಾರವಾಡದಲ್ಲಿ ಕೊರೊನಾ ಎಫೆಕ್ಟ್

ಧಾರವಾಡದ ಡಿಮ್ಹಾನ್ಸ್​ನಲ್ಲಿ 2016 ರಲ್ಲಿ ಆರಂಭವಾಗಿದ್ದ ಪ್ರಯೋಗಾಲಯವನ್ನು ಈಗ ಕೊರೊನಾ ಪತ್ತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಸೋಂಕಿತರು, ಸಂಖಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆ ಈ ಲ್ಯಾಬ್​ ಅನ್ನು ಬಳಸಿಕೊಳ್ಳಲಾಗ್ತಿದೆ.

ddwd
ಧಾರವಾಡದಲ್ಲಿ ಕೊರೊನಾ ಪರೀಕ್ಷೆಗಾಗಿ ಮತ್ತೊಂದು ಲ್ಯಾಬ್​

By

Published : Apr 22, 2020, 12:56 PM IST

ಧಾರವಾಡ: ದಿನದಿಂದ ದಿನಕ್ಕೆ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಜಿಲ್ಲೆಯಲ್ಲಿ ಮತ್ತೊಂದು ಪ್ರಯೋಗಾಲಯ ಪ್ರಾರಂಭಿಸಲಾಗಿದೆ.

ಧಾರವಾಡದಲ್ಲಿ ಕೊರೊನಾ ಪರೀಕ್ಷೆಗಾಗಿ ಮತ್ತೊಂದು ಲ್ಯಾಬ್​

ಶಂಕಿತರ ಮಾದರಿಗಳನ್ನು ಬೇಗ ಪರೀಕ್ಷೆ ಮಾಡುವ ದೃಷ್ಟಿಯಿಂದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ವೈರಸ್ ಪತ್ತೆ ಮಾಡಲು ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗಿದೆ. ಇದರಿಂದ ಶಂಕಿತರ ಮಾದರಿಗಳನ್ನು ಬೇಗ ಪತ್ತೆ ಮಾಡಬಹುದಾಗಿದೆ. ಡಿಮ್ಹಾನ್ಸ್​ನಲ್ಲಿ 2016 ರಲ್ಲಿ ಆರಂಭವಾಗಿದ್ದ ಪ್ರಯೋಗಾಲಯ ಈಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ರಾಜ್ಯದಲ್ಲಿ ಕೊರೊನಾ ಶಂಕಿತರು ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ಅನುದಾನದಲ್ಲಿ ಲ್ಯಾಬ್ ಆರಂಭಿಸಲಾಗಿದೆ. ದಿನಕ್ಕೆ 100ಕ್ಕೂ ಹೆಚ್ಚು ಪರೀಕ್ಷೆ ನಡೆಸಬಹುದಾಗಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಕೋವಿಡ್ ಪ್ರಯೋಗಾಲಯವಾಗಿದೆ.

ABOUT THE AUTHOR

...view details