ಧಾರವಾಡ: ಬ್ರಿಟಿಷರ ವಿರುದ್ಧ ನಡೆದದ್ದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಈಗ ಮತೀಯವಾದಿಗಳ ವಿರುದ್ಧ ನಡಿಯುತ್ತಿರುವುದು ಎರಡನೇಯ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರೋಕ್ಷವಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮತೀಯವಾದಿಗಳ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ: ಉಗ್ರಪ್ಪ - second freedom moment against fascism
ಬ್ರಿಟಿಷರ ವಿರುದ್ಧ ನಡೆದದ್ದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಈಗ ಮತೀಯವಾದಿಗಳ ವಿರುದ್ಧ ನಡಿಯುತ್ತಿರುವುದು ಎರಡನೇಯ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರೋಕ್ಷವಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇಲ್ಲಿನ ಕಡಪಾ ಮೈದಾನದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗ ಸೂರ್ಯಗ್ರಹಣ ಬಿಟ್ಟಿದೆ. ಮೋದಿ ಮತ್ತು ಅಮಿತ್ ಶಾ ರಾಹು-ಕೇತು ಇದ್ದಂತೆ. ಅವರಿಬ್ಬರಿಂದ ದೇಶಕ್ಕೆ ಗ್ರಹಣ ಹಿಡಿದಿದೆ. ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಅಬ್ಬರಿಸುತ್ತಿದ್ದವರಿಗೆ ಮತದಾರರು ಬಿಜೆಪಿ ಮುಕ್ತ ಮಾಡುವ ಎಲ್ಲಾ ಸೂಚನೆಗಳನ್ನು ವಿಧಾನಸಭೆ ಚುನಾವಣೆಗಳಲ್ಲಿ ನೀಡುತ್ತಿದ್ದಾರೆ ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಘ ಪರಿವಾರದವರು ಬ್ರಿಟಿಷರ ಜೊತೆ ಇದ್ದರು. ಒಂದು ಧರ್ಮ, ಸಂಸ್ಕೃತಿ ನಮ್ಮದಲ್ಲ. ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂವಿಧಾನ ಅಂಬೇಡ್ಕರ್ ಕೊಟ್ಟಿದ್ದಾರೆ. ಅಪಾಯಕಾರಿ ಮನುಧರ್ಮ ಶಾಸ್ತ್ರ ಜಾರಿಗೆ ತರಲು ಮೋದಿ, ಅಮಿತ್ ಶಾ ಹೊರಟಿದ್ದಾರೆ ಎಂದು ಕಿಡಿಕಾರಿದರು.