ಕರ್ನಾಟಕ

karnataka

ETV Bharat / state

ಕೋವಿಡ್ ವಾರಿಯರ್ಸ್​​​​ಗೆ ಸಿರಿಧಾನ್ಯ ವಿತರಿಸಲು ಮುಂದಾದ ಎಸ್ ಡಿಎಮ್ ಸಂಸ್ಥೆ - SDM distributes cookies

ಎಸ್ ಡಿ ಎಮ್ ಆಸ್ಪತ್ರೆಗಳಲ್ಲಿರುವ ಕೋವಿಡ್ ಸೆಂಟರ್​​​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಮತ್ತು ನರ್ಸ್ ಗಳಲ್ಲಿ ಸಿರಿದಾನ್ಯ ಕುಕ್ಕೀಸ್ ನೀಡಲು ಸಂಸ್ಥೆ ಮುಂದಾಗಿದೆ.

Dharwad
Dharwad

By

Published : Aug 6, 2020, 9:59 AM IST

ಧಾರವಾಡ:ಎಸ್.ಡಿ.ಎಮ್. ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಸೆಂಟರ್​​​​ಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗೆ ಸಿರಿಧಾನ್ಯಗಳ ಕುಕ್ಕೀಸ್ ನೀಡಲು ಸಂಸ್ಥೆ ಮುಂದಾಗಿದೆ.

ಆರು ಗಂಟೆಗಳ ಕಾಲ ವೈಯಕ್ತಿಕ ಸಂರಕ್ಷಣೆಯ ಸಾಧನ ಧರಿಸಿ ಕೆಲಸ ಮಾಡುವುದರಿಂದ ವೈದ್ಯಕೀಯ ಸಿಬ್ಬಂದಿಗೆ ಕರ್ತವ್ಯದ ಸಮಯದಲ್ಲಿ ಆಹಾರ, ನೀರು ಸೇವನೆ ಸಾಧ್ಯವಿಲ್ಲ. ಹಾಗಾಗಿ ಕರ್ತವ್ಯ ಮುಗಿಸಿದ ತಕ್ಷಣ ಅಧಿಕ ಪೋಷಕಾಂಶ ಹಾಗೂ ನಾರಿನ ಅಂಶವುಳ್ಳ ಸಿರಿಧಾನ್ಯ, ಕುಕ್ಕೀಸ್ ನೀಡಲು ನಿರ್ಧರಿಸಿದೆ.

ಈ ಸಂಬಂಧ ರಾಯಾಪುರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಿರಿಧಾನ್ಯ ಘಟಕದಲ್ಲಿ ನವಣೆ, ರಾಗಿ, ಜೋಳ ಹಾಗೂ ಸಜ್ಜೆಯ ಕುಕ್ಕೀಸ್ ಉತ್ಪಾದಿಸಿ ವಿತರಿಸಲು ಮುಂದಾಗಿದೆ.

ಎಸ್.ಡಿ.ಎಮ್ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್‍ಕುಮಾರ್, ಪದ್ಮಲತಾ ನಿರಂಜನ್, ಡಾ.ಪ್ರಕಾಶ್ ಭಟ್, ಮಂಜುಳಾ ಹಾಗೂ ಮಹಾಬಲೇಶ್ವರ ಪಟಗಾರ ಇವರ ಉಪಸ್ಥಿತಿಯಲ್ಲಿ ಸಿರಿಧಾನ್ಯ ಕುಕ್ಕೀಸ್ ವಿತರಣೆಗೆ ಚಾಲನೆ ನೀಡಲಾಯಿತು.

ABOUT THE AUTHOR

...view details