ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಡಕೋಟ ಬಸ್ಗಳದ್ದೇ ಕಾರುಬಾರು: ಜೀವ ಕೈಲಿಡಿದು ಬಸ್ ಹತ್ತುವ ಪ್ರಯಾಣಿಕರು - ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್ಗಳ ಬಳಕೆ
ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗಳಲ್ಲಿ ಸಾವಿರಕ್ಕೂ ಹೆಚ್ಚು ಬಸ್ಗಳ ಅವಧಿ ಮುಗಿದಿದೆ. ಕೇಂದ್ರ ಸರ್ಕಾರದ ಹಳೆಯ ವಾಹನಗಳ ಗುಜರಿ ನೀತಿ ಅನ್ವಯ ಅವುಗಳನ್ನು ಗುಜರಿಗೆ ಹಾಕಬೇಕು. ಆದರೆ, ಗುಜರಿಗೆ ಹಾಕಬೇಕಾದ ಬಸ್ ಗಳಲ್ಲೇ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದು, ಜನರ ಪ್ರಾಣದ ಜೊತೆ ಚೆಲ್ಲಾಡವಾಡುತ್ತಿದೆ.
![ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಡಕೋಟ ಬಸ್ಗಳದ್ದೇ ಕಾರುಬಾರು: ಜೀವ ಕೈಲಿಡಿದು ಬಸ್ ಹತ್ತುವ ಪ್ರಯಾಣಿಕರು scraping policy for vehicle not implementing in hubli](https://etvbharatimages.akamaized.net/etvbharat/prod-images/768-512-10518915-thumbnail-3x2-bus.jpg)
ಹುಬ್ಬಳ್ಳಿ
ಹುಬ್ಬಳ್ಳಿ: 20 ವರ್ಷ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ 10-15 ವರ್ಷಗಳ ಕಾಲ ಹತ್ತಾರು ಲಕ್ಷ ಕಿ.ಮೀ. ಕ್ರಮಿಸಿರುವ ಹಳೆಯ ವಾಹನಗಳು ಇನ್ನೂ ರಸ್ತೆಗಿಳಿಯುತ್ತಿವೆ.
ಹುಬ್ಬಳ್ಳಿ
ಹತ್ತಕ್ಕೂ ಹೆಚ್ಚು ಲಕ್ಷ ಕಿ.ಮೀ. ದೂರ ಕ್ರಮಿಸಿರುವ ಬಸ್ಗಳು ವಾಯುವ್ಯ ಸಾರಿಗೆ ನಿಗಮದಲ್ಲಿ ಸಾವಿರಾರು ಇವೆ. ಏಳೂವರೆ ಲಕ್ಷ ಕಿ.ಮೀ. ಓಡಿದ ಬಸ್ಗಳನ್ನ ಗುಜರಿಗೆ ಹಾಕಬೇಕಾಗಿದ್ರು ಅದೇ ಬಸ್ಗಳಲ್ಲೆ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಗುಜರಿ ಹಾಕಬೇಕಾಗಿರುವ ಬಸ್ಗಳನ್ನ ಮತ್ಯಾಕೆ ರೋಡಿಗೆ ಇಳಿಸುತ್ತಿದ್ರೀ ಅಂತಾ ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನ ಕೇಳಿದ್ರೆ, ಹೊಸ ಬಸ್ಗಳಿಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.ಲಾಕ್ಡೌನ್ ನಷ್ಟ ಇರುವ ಕಾರಣ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ.
ಈ ಡಕೋಟಾ ಎಕ್ಸ್ಪ್ರೆಸ್ ಬಸ್ಗಳನ್ನ ಇಟ್ಟುಕೊಂಡು ವಾಯುವ್ಯ ಸಾರಿಗೆ ಸಂಸ್ಥೆ ಬಸ್ ಸೇವೆ ನೀಡುತ್ತಿದೆ. ಅಲ್ಲದೇ ಹೊಸ ಬಸ್ಗಳನ್ನ ಒದಗಿಸಿ ಅಂತಾ ಸರ್ಕಾರಕ್ಕೆ ಪತ್ರ ಬರೆದ್ರೂ ಸಾರಿಗೆ ಸಚಿವರು ಮಾತ್ರ ವಾಯುವ್ಯ ಸಾರಿಗೆ ಸಂಸ್ಥೆಗೆ ಹೊಸ ಬಸ್ಗಳನ್ನ ನೀಡ್ತಾ ಇಲ್ಲ. ಹೀಗಾಗಿ ಒಂದೆಡೆ ನಷ್ಟ ಇನ್ನೊಂದೆಡೆ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಡವಾಡುತ್ತಲೇ ಸೇವೆ ನೀಡಬೇಕಾದ ಪರಿಸ್ಥಿತಿ ವಾಯುವ್ಯ ಸಾರಿಗೆ ಸಂಸ್ಥೆ ಬಂದೊದಗಿದೆ.