ಹುಬ್ಬಳ್ಳಿ :ಸ್ಕೂಟಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ-ಧಾರವಾಡದ ನವನಗರದಲ್ಲಿ ನಡೆದಿದೆ.
ಸ್ಕೂಟಿಗೆ ಆ್ಯಂಬುಲೆನ್ಸ್ ಡಿಕ್ಕಿ : ಸವಾರನಿಗೆ ಗಂಭೀರ ಗಾಯ - Hubli crime latest news
ಹುಬ್ಬಳ್ಳಿ-ಧಾರವಾಡದ ನವನಗರದಲ್ಲಿ ಸ್ಕೂಟಿ ಹಾಗೂ ಆ್ಯಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿದೆ.
![ಸ್ಕೂಟಿಗೆ ಆ್ಯಂಬುಲೆನ್ಸ್ ಡಿಕ್ಕಿ : ಸವಾರನಿಗೆ ಗಂಭೀರ ಗಾಯ Accident](https://etvbharatimages.akamaized.net/etvbharat/prod-images/768-512-04:54:53:1599045893-kn-hbl-04-accident-av-7208089-02092020142605-0209f-1599036965-1013.jpg)
Accident
ಸುನೀಲ್ ಪಾಟೀಲ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ಸ್ಕೂಟಿಯಲ್ಲಿ ಹೊರಟಿದ್ದ ವ್ಯಕ್ತಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸುನೀಲ್ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಉತ್ತರ ವಲಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.