ಧಾರವಾಡ: ಕೊರೊನಾ ಲಾಕ್ಡೌನ್ನಿಂದ ದೇಶಾದ್ಯಂತ ಶಾಲೆಗಳು ಬಂದ್ ಆಗಿದ್ದವು. ಇದೀಗ ರಾಜ್ಯದಲ್ಲಿ 9 ಮತ್ತು 10 ನೇ ತರಗತಿಗಳನ್ನು ತೆರೆಯಲಾಗಿದೆ. ಶಾಲೆ ಆರಂಭಕ್ಕೂ ಮುನ್ನ ಮಕ್ಕಳು ಬರುತ್ತಾರೆಯೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಿತ್ಯವೂ ಶೇ.75ರಷ್ಟು ಹಾಜರಾತಿ ಕಂಡು ಬರುತ್ತಿದೆ.
ಧಾರವಾಡದಲ್ಲಿ ಶಾಲೆ ಆರಂಭ: ನಿತ್ಯ 75 ರಷ್ಟು ಹಾಜರಾತಿ - Dharwad Lockdown
ರಾಜ್ಯದಲ್ಲಿ 9 ಮತ್ತು 10ನೇ ತರಗತಿಗಳನ್ನು ತೆರೆಯಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿತ್ಯವೂ ಶೇ.75ರಷ್ಟು ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ.
9 ನೇ ತರಗತಿಗೆ ಜಿಲ್ಲೆಯಲ್ಲಿ 29,372 ಮಕ್ಕಳು ನೋಂದಣಿ ಮಾಡಿದ್ದು, ನಿತ್ಯವೂ ಸರಿ ಸುಮಾರು 22,523 ಮಕ್ಕಳು ಹಾಜರಾಗುತ್ತಿದ್ದಾರೆ. ಇದರ ಹಾಜರಾತಿ ಪ್ರಮಾಣ ಸರಾಸರಿ ಶೇ. 76ರಷ್ಟು ಆಗುತ್ತಿದೆ. ಇನ್ನು 10 ನೇ ತರಗತಿಗೆ 33,406 ಮಕ್ಕಳ ನೊಂದಣಿ ಮಾಡಿಸಿಕೊಂಡಿದ್ದು, ನಿತ್ಯ 26,717 ವಿದ್ಯಾರ್ಥಿಗಳು ಅಂದರೆ ಶೇ. 74ರಷ್ಟು ಹಾಜರಾತಿ ಬರುತ್ತಿದೆ.
ಆನ್ಲೈನ್ ಕ್ಲಾಸ್ನಿಂದ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ಶಾಲೆ ಆರಂಭ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸತತವಾಗಿ ಬಂದ್ ಆಗಿದ್ದ ಶಾಲೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಕೇಳುವಂತಾಗಿದೆ.