ಹುಬ್ಬಳ್ಳಿ: ಕೊರೊನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿಂದ ಶಿಕ್ಷಣ ಕೇತ್ರ ಸಂಪೂರ್ಣ ಬಂದ್ ಆಗಿದ್ದು, ಇದೀಗ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಆದೇಶ ನೀಡಿರುವ ಹಿನ್ನೆಲೆ ಆಡಳಿತ ಮಂಡಳಿಗಳು ಸಿದ್ದತೆ ನಡೆಸಿವೆ.
ಜನೇವರಿ 1ಕ್ಕೆ ಶಾಲಾ ಕಾಲೇಜು ಆರಂಭ.. ಹುಬ್ಬಳ್ಳಿಯಲ್ಲಿ ಕೊರೊನಾ ಮುಂಜಾಗ್ರತೆ ಹೇಗಿದೆ ? - Corona preoccupation in hubbali
ಮಕ್ಕಳು ಆನ್ಲೈನ್ ಶಿಕ್ಷಣಕ್ಕೆ ಆಸಕ್ತಿ ತೋರದಿರುವುದನ್ನು ಮನಗಂಡ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಆದೇಶ ನೀಡಿದೆ. ಇದರಿಂದಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಆಡಳಿತ ಮಂಡಳಿಗಳು ತೆಗೆದುಕೊಂಡಿವೆ.
ಮಕ್ಕಳು ಆನ್ಲೈನ್ ಶಿಕ್ಷಣಕ್ಕೆ ಆಸಕ್ತಿ ತೋರದಿರುವುದನ್ನು ಮನಗಂಡ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಆದೇಶ ನೀಡಿದೆ. ಇದರಿಂದಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ. ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ, ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಲಾಗುತ್ತಿದೆ. ಕೊರೊನಾ ಭಯ ಬಿಟ್ಟು ಶಾಲೆಗೆ ಬನ್ನಿ ಎಂದು ಉತ್ಸಾಹದಿಂದ ಮನವಿ ಮಾಡುತ್ತಿದ್ದಾರೆ.
ಮಕ್ಕಳಿಗೆ ಆನ್ಲೈನ್ ಕ್ಲಾಸ್ಗಳಿಂದ ಮನಮುಟ್ಟುವಂತಹ ಶಿಕ್ಷಣ ದೊರಕುತ್ತಿಲ್ಲ. ಆದ ಕಾರಣ ಎಲ್ಲಾ ಶಿಕ್ಷಣ ಮಂಡಳಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದವು. ಇದನ್ನು ಪರಿಗಣಿಸಿದ ಸರ್ಕಾರ ರೂಪಾಂತರ ಕೊರೊನಾ ನಡುವೆಯೂ ಮಕ್ಕಳ ಹಿತದೃಷ್ಟಿಯಿಂದ ಜನವರಿ 1 ರಿಂದ ಒಂಬತ್ತು, ಹತ್ತನೇ ತರಗತಿ, ಮತ್ತು ಪಿಯುಸಿ ಪ್ರಾರಂಭಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದೆ.