ಹುಬ್ಬಳ್ಳಿ:ಶಾಲಾ-ಕಾಲೇಜುಗಳು ಪ್ರಾರಂಭಗೊಂಡಿದ್ದು, ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ಸಂತೋಷ ಮನೆ ಮಾಡಿದೆ. ಇಷ್ಟು ದಿನ ಮನೆಯಲ್ಲಿಯೇ ಇದ್ದ ಮಕ್ಕಳು ಶಾಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಮಕ್ಕಳನ್ನು ಸ್ವಾಗತಿಸಿದರು.
ವಾಣಿಜ್ಯ ನಗರಿಯಲ್ಲಿ ಮದುವಣಗಿತ್ತಿಯಂತೆ ಶೃಂಗಾರಗೊಂಡ ಶಾಲಾ-ಕಾಲೇಜುಗಳು - ಹುಬ್ಬಳ್ಳಿ ಶಾಲೆ ಆರಂಭ ಸುದ್ದಿ
ಸುಮಾರು 10 ತಿಂಗಳ ಬಳಿಕ ಶಾಲೆ ಪ್ರಾರಂಭವಾಗಿದ್ದು, ದೇಶಪಾಂಡೆ ನಗರದ ಜ್ಞಾನಭಾರತಿ ಶಾಲೆಯಲ್ಲಿ ತಳಿರು ತೋರಣದ ಮೂಲಕ ಶೃಂಗಾರಗೊಳಿಸಿದ್ದು, ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಶೃಂಗಾರಗೊಂಡ ಶಾಲಾ-ಕಾಲೇಜುಗಳು
ಹೊಸ ವರ್ಷದ ಮೊದಲ ದಿನವೇ ಶಾಲಾ ಕಾಲೇಜು ಆರಂಭಗೊಂಡಿರುವುದು ಸಂಭ್ರಮಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ. ದೇಶಪಾಂಡೆ ನಗರದ ಜ್ಞಾನಭಾರತಿ ಶಾಲೆಯಲ್ಲಿ ತಳಿರು ತೋರಣದ ಮೂಲಕ ಶೃಂಗಾರಗೊಳಿಸಿದ್ದು, ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶೃಂಗಾರಗೊಂಡ ಶಾಲಾ-ಕಾಲೇಜುಗಳು
ವಿದ್ಯಾರ್ಥಿಗಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಶಿಕ್ಷಕರು ವಿನೂತನ ಪ್ರಯತ್ನ ನಡೆಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.