ಹುಬ್ಬಳ್ಳಿ: ಸ್ಥಗಿತಗೊಂಡಿದ್ದ ಎಸ್‌ಬಿಐ ಬ್ಯಾಂಕ್ನ ಯೋನೋ ಆ್ಯಪ್ ಸರಿಮಾಡುವುದಾಗಿ ತಿಳಿಸಿದ ವ್ಯಕ್ತಿಯೊಬ್ಬ ನಗರದ ನಿವಾಸಿಯೊಬ್ಬರಿಗೆ ಸುಮಾರು 97 ಸಾವಿರ ರೂ. ಮೋಸ ಮಾಡಿದ್ದಾನೆ.
ಆನ್‌ಲೈನ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕುವಾಗ ಹುಷಾರಾಗಿರಿ! ಇಲ್ಲೊಬ್ಬರು ₹97 ಸಾವಿರ ಕಳ್ಕೊಂಡಿದ್ದಾರೆ! - ಹುಬ್ಬಳ್ಳಿ ಸುದ್ದಿ
ಯೋನೋ ಆ್ಯಪ್‌ನಲ್ಲಿರುವ ದೋಷ ಸರಿ ಮಾಡುವುದಾಗಿ ಹೇಳಿರುವ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರಿಗೆ ವಂಚನೆ ಎಸಗಿರುವ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ನಗರದಲ್ಲಿ ನೆಲೆಸಿರುವ ವ್ಯಕ್ತಿ ಅಮನ್ ಕುಮಾರ್ ಎಂಬವರು ಸ್ಥಗಿತಗೊಂಡಿದ್ದ ಯೋನೋ ಆ್ಯಪ್ ಸ್ಟಾರ್ಟ್ ಮಾಡಲು ಗೂಗಲ್‌ನಲ್ಲಿ ಎಸ್‌ಬಿಐ ಹೆಲ್ಪ್‌ಲೈನ್ ಸಂಖ್ಯೆ ಹುಡುಕಿ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಸಮಸ್ಯೆ ಸರಿಪಡಿಸುವುದಾಗಿ ನಂಬಿಸಿದ್ದಾನೆ. ಇದೇ ವೇಳೆ, ನೆಟ್ ಬ್ಯಾಂಕಿಂಗ್ ಯೂಸರ್ ನೇಮ್, ಪಾಸ್‌ವರ್ಡ್ ಹಾಕಿ ಲಾಗಿನ್ ಮಾಡಿಸಿ, ಟೀಮ್ ವ್ಯೂವರ್ ಕ್ಲಿಕ್ ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಅದರ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ.
ಸದ್ಯ ಘಟನೆಯಿಂದ ಕಂಗಾಲಾದ ಅಮನ್ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.