ಧಾರವಾಡ:ದೇಶದಲ್ಲಿ ಡಿಮನಿಟೈಜೇಶನ್ ರೀತಿಯೇ ಡಿ'ಸಿಟಿಜನೈಜೇಶನ್ ಮಾಡಲಾಗುತ್ತಿದೆ. ನಾವು ಫ್ಯಾಸಿಸ್ಟ್ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.
ಡಿಮನಿಟೈಜೇಶನ್ ರೀತಿಯೇ ಡಿ'ಸಿಟಿಜನೈಜೇಶನ್ ಮಾಡಲಾಗುತ್ತಿದೆ: ಸಸಿಕಾಂತ ಸೆಂಥಿಲ್ ಆಕ್ರೋಶ
ಧಾರವಾಡದಲ್ಲಿ ಸಿಎಎ, ಎನ್.ಆರ್.ಸಿ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶ ನಡೆಯಿತು.
ಧಾರವಾಡದಲ್ಲಿ ನಡೆದ ಸಿಎಎ, ಎನ್.ಆರ್.ಸಿ. ಎನ್.ಪಿ.ಆರ್ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫ್ಯಾಸಿಸಂನಲ್ಲಿ ಒಬ್ಬ ಹೀರೋ ಬೇಕು ಆತನ ಮೂಲಕ ಫ್ಯಾಸಿಸಂ ಬೆಳೆಯುತ್ತೆ ಎಂದು ಉದಾಹರಣೆ ಸಹಿತ ವಿವರಿಸಿ ಮೋದಿ ವಿರುದ್ಧ ಸೆಂಥಿಲ್ ವಾಗ್ದಾಳಿ ನಡೆಸಿದರು.
ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟಿಸೋದೇ ಇವರ ಕೆಲಸ. ಫ್ಯಾಸಿಸ್ಟ್ ಗಳು ಒಂದು ಗುಂಪನ್ನ ಟಾರ್ಗೆಟ್ ಮಾಡ್ತಾರೆ ಅವರನ್ನು ತೋರಿಸುತ್ತಲೇ ಆಟವಾಡುತ್ತಾರೆ. ನಮ್ಮ ದೇಶದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ. ಅವರನ್ನ ತೋರಿಸುತ್ತಲೇ ಗೆದ್ದುಬಿಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಸ್ವತಂತ್ರ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಾರೆ. ಇಲ್ಲಿ ವಿಶ್ವವಿದ್ಯಾಲಯಗಳನ್ನ ಟಾರ್ಗೆಟ್ ಮಾಡಲಾಗಿದೆ. ಆರು ವರ್ಷದಿಂದ ಜೆಎನ್‌ಯು ಜೊತೆ ಸರ್ಕಾರ ಜಗಳ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
TAGGED:
ಸಿಎಎ ವಿರೋಧಿಸಿ ಸಮಾವೇಶ