ಹುಬ್ಬಳ್ಳಿ :ನನ್ನ ಸ್ನೇಹಿತನ ಸಾವಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗದೇ ಇದ್ರೆ ಹೇಗೆ? ಎಂದು ಮೃತ ಸಂತೋಷ್ ಪಾಟೀಲ್ ಸ್ನೇಹಿತ ಸುನೀಲ್ ಪವಾರ್ ಪ್ರಶ್ನಿಸಿದ್ದಾರೆ. ಸ್ನೇಹಿತನ ಸಾವಿನ ಸುದ್ದಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ ನನಗೆ ಬಹಳ ವರ್ಷಗಳ ಪರಿಚಯ. ಹುಬ್ಬಳ್ಳಿಗೆ ಬಂದ್ರೆ ನಮ್ಮ ಮನೆಗೆ ಬರದೇ ಹೋಗ್ತಿರಲಿಲ್ಲ. ನಾನು ಕೂಡ ಅವರ ಮನೆಗೆ ಹೋಗ್ತಿದ್ದೆ ಎಂದು ನೆನೆದರು.
ಸಂತೋಷ ಪಾಟೀಲ್ ಸಾವಿಗೆ ನ್ಯಾಯ ಸಿಗ್ಬೇಕು.. ಸ್ನೇಹಿತ ಸುನೀಲ್ ಪವಾರ ಒತ್ತಾಯ - ಮೃತ ಸಂತೋಷ ಪಾಟೀಲ್ ಸಾವಿಗೆ ನ್ಯಾಯ ದೊರಕಿಸುವಂತೆ ಸುನೀಲ್ ಪವಾರ್ ಒತ್ತಾಯ
ಕೆ ಎಸ್ ಈಶ್ವರಪ್ಪ ವಿರುದ್ದದ ಪ್ರಕರಣ ನನ್ನ ಬಳಿಯೂ ಹೇಳಿದ್ದ. ಎಲ್ಲವೂ ನಿಮಗೆ ಗೊತ್ತಿದೆ. ನಿಮಗೆ ಡೆತ್ ನೋಟ್ ಕಳುಹಿಸಿದ್ದಾನೆ. ಅವನ ಸಾವಿಗೆ ನ್ಯಾಯ ಸಿಗಬೇಕು. ಮಾಧ್ಯಮದ ಮೂಲಕವೇ ತನಿಖೆಯಾಗಲಿ..
ಸುನೀಲ್ ಪವಾರ
ಆದರೆ, ಕೆ ಎಸ್ ಈಶ್ವರಪ್ಪ ವಿರುದ್ದದ ಪ್ರಕರಣ ನನ್ನ ಬಳಿಯೂ ಹೇಳಿದ್ದ. ಎಲ್ಲವೂ ನಿಮಗೆ ಗೊತ್ತಿದೆ. ನಿಮಗೆ ಡೆತ್ ನೋಟ್ ಕಳುಹಿಸಿದ್ದಾನೆ. ಅವನ ಸಾವಿಗೆ ನ್ಯಾಯ ಸಿಗಬೇಕು. ಮಾಧ್ಯಮದ ಮೂಲಕವೇ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಓದಿ:ಸಚಿವ ಈಶ್ವರಪ್ಪನವ್ರು ಅರೆಸ್ಟ್ ಆಗೋವರೆಗೂ ಸಂತೋಷ್ನ ಅಂತ್ಯಕ್ರಿಯೆ ಮಾಡಲ್ಲ.. ಮತೃನ ಸೋದರ ಪ್ರಶಾಂತ್