ಹುಬ್ಬಳ್ಳಿ :ಉತ್ತರ ಕರ್ನಾಟಕದ ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1600 ಕೋಟಿ ರೂಪಾಯಿಗಳನ್ನ ಈ ಯೋಜನೆಯ ಕಾಮಗಾರಿಗೆ ತೆಗೆದಿಟ್ಟಿದೆ. ಆದರೂ ಕಾಮಗಾರಿ ಶುರುವಾಗಿಲ್ಲ. ಆದರೆ, ಈಗ ಜನರಲ್ಲಿ ಆಶಾಭಾವನೆ ಮೊಳಕೆ ಒಡೆದಿದೆ.
ಸುಮಾರು ನಾಲ್ಕು ದಶಕಗಳಿಂದ ಕಳಸಾ-ಬಂಡೂರಿ ಹೋರಾಟ ನಡೆಯುತ್ತಿದೆ. ನಿರಂತರ ಹೋರಾಟದ ಫಲವಾಗಿ ನ್ಯಾಯಾಧಿಕರಣದ ತೀರ್ಪು ಹೊರ ಬಂದು ರಾಜ್ಯಗಳಿಗೆ ನೀರು ಹಂಚಿಕೆಯಾಗಿತ್ತು. ಬಳಿಕ ಗೆಜೆಟ್ ನೋಟಿಪಿಕೇಶನ್ ಆಗಿಲ್ಲ ಅಂತಾ ಸರ್ಕಾರ ಕುಂಟು ನೆಪ ಹೇಳುತ್ತಾ ಹೋದಾಗ, ಕೊನೆಗೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ವರ್ಷಗಳೇ ಕಳೆಯುತ್ತಿದೆ. ಹೀಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.