ಕರ್ನಾಟಕ

karnataka

ETV Bharat / state

ಶ್ರೀಗಂಧ ಮರ ಕಳ್ಳತನ: ಮೂವರು ಆರೋಪಿಗಳ ಬಂಧನ - ಶ್ರೀಗಂಧದ ಮರ

ಸತ್ತೂರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮೂವರು ಕಳ್ಳರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ‌

Sandalwood theft
ಶ್ರೀಗಂಧ ಮರ ಕಳ್ಳತನ

By

Published : Dec 15, 2020, 12:22 PM IST

ಧಾರವಾಡ: ಸತ್ತೂರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆಯ ದೇವರಗುಡಿಹಾಳದ ಮೆಹಬೂಬಸಾಬ್ ಸವಣೂರ, ಕಲಘಟಗಿಯ ಕೃಷ್ಣಪ್ಪ ಲಮಾಣಿ ಹಾಗೂ ಮುರ್ಕವಾಡ ಗ್ರಾಮದ ಅರ್ಜುನ ಮಾಚಕ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಶ್ರೀಗಂಧದ ಮರಗಳನ್ನು ಕಡಿದು ತುಂಡು ತುಂಡಾಗಿ ಮಾಡಿ ಸಾಗಿಸುತ್ತಿದ್ದ ವೇಳೆ ‌ಕಳ್ಳರು ಬಲೆಗೆ ‌ಬಿದ್ದಿದ್ದಾರೆ. ಸುಮಾರು 71 ಕೆಜಿಯಷ್ಟು ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ABOUT THE AUTHOR

...view details