ಧಾರವಾಡ: ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡುಬಡವರು ಹಾಗೂ ವಿಕಲ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ದಸರಾ ಹಬ್ಬದ ನಿಮಿತ್ತ ಆಹಾರ ಕಿಟ್ ವಿತರಣೆ ಮಾಡಿದ ಸಮರ್ಥನಂ ಸಂಸ್ಥೆ - Distributed Food Kit for Dasara Festival
ಧಾರವಾಡದ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡುಬಡವರು ಹಾಗೂ ವಿಕಲ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಸಮರ್ಥನಂ ಸಂಸ್ಥೆ
ಕೊರೊನಾ ವೈರಸ್ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಜನರು ಕೈಯಲ್ಲಿ ಸರಿಯಾದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವೇಳೆ ಸಾಲು ಸಾಲು ಹಬ್ಬಗಳು ಬಂದಿವೆ. ಹೀಗಾಗಿ ಹಬ್ಬದ ಆಚರಣೆಗೆ ಸಹಾಯವಾಗಲೆಂದು ಸಮರ್ಥನಂ ಅಂಗವಿಕಲರ ಸಂಸ್ಥೆ ಆಹಾರ ಕಿಟ್ ವಿತರಣೆ ಮಾಡಿತು.
ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಅರ್ಹ ಫಲಾನುಭವಿಗಳು ಆಗಮಿಸಿ ಆಹಾರ ಕಿಟ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಉದಯಕುಮಾರ ವೈ ಬಾಗುನವರ, ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣಾ ಲಮಾಣಿ, ಪ್ರಾಣೇಶ ಹೇಮಾದ್ರಿ, ಮಂಜುನಾಥ ಕಂಬಿ ಸೇರಿದಂತೆ ಸಂಸ್ಥೆಯ ಇತರೆ ಸಿಬ್ಬಂದಿ ವರ್ಗ ಇದ್ದರು.