ಹುಬ್ಬಳ್ಳಿ: ನಗರದ ಹೆಗ್ಗೇರಿ ಆಯುರ್ವೇದಿಕ್ ಕಾಲೇಜಿನ ಹೆಸರಲ್ಲಿ ನಕಲಿ ಖಾತೆ ತೆರೆದು 24 ಲಕ್ಷ ರೂಪಾಯಿಯನ್ನ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಯುರ್ವೇದ ಕಾಲೇಜ್ ಹೆಸರಿನಲ್ಲಿ ನಕಲಿ ಖಾತೆ ಬಳಸಿ 24 ಲಕ್ಷ ರೂ. ವಂಚನೆ - ಆಯುರ್ವೇದ ಕಾಲೇಜ್,
2017-18ರಲ್ಲಿನ ಪ್ರಕರಣ ಇದಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮಾ ಮಾಡುವ ಬದಲು, ನಕಲಿ ಖಾತೆಗೆ ಜಮಾ ಮಾಡಿ ವಂಚಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಒಟ್ಟು 24 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ದೂರು ನೀಡಲಾಗಿದೆ.

ನಕಲಿ ಖಾತೆ ಬಳಸಿ 24 ಲಕ್ಷ ರೂ ವಂಚನೆ
ಆಯುರ್ವೇದಿಕ್ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ತೆರೆದಿರುವ ಹಿಂದುಳಿದ ವರ್ಗದ ಇಲಾಖೆಯ ಸಿಬ್ಬಂದಿವೋರ್ವ, ವಿದ್ಯಾರ್ಥಿ ವೇತನವನ್ನ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.
2017-18ರಲ್ಲಿನ ಪ್ರಕರಣ ಇದಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮಾ ಮಾಡುವ ಬದಲು, ನಕಲಿ ಖಾತೆಗೆ ಜಮಾ ಮಾಡಿ ವಂಚನೆ ಮಾಡಲಾಗಿದೆ. ವಿದ್ಯಾರ್ಥಿಗಳ ಒಟ್ಟು 24 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.