ಹುಬ್ಬಳ್ಳಿ :ಸಂಚಾರಿನಿಯಮ ಉಲ್ಲಂಘಿಸಿದರೈಲ್ವೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಟ್ರಾಫಿಕ್ ಪೊಲೀಸರಿಗೆ ಧಮ್ಕಿ ಹಾಕಿದ ಘಟನೆ ನಗರದ ನೆಹರೂ ಕ್ರಿಡಾಂಗಣದ ಪಕ್ಕದ ಅಜಂತಾ ಹೋಟೆಲ್ ಬಳಿ ನಡೆದಿದೆ.
ನಿಯಮ ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಗೆ ಆವಾಜ್ ಹಾಕಿದ ರೈಲ್ವೆ ಮಹಿಳಾ ಪೊಲೀಸ್ ಪೇದೆ! - latest news of hubli
ರೈಲ್ವೆ ಮಹಿಳಾ ಪೊಲೀಸ್ ಪೇದೆ ಸಂಚಾರಿ ನಿಯಮವನ್ನು ಗಾಳಿಗೆ ತೂರಿದ್ದಲ್ಲದೇ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಾರೆಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಆರ್‌ಪಿಎಫ್ ಮಹಿಳಾ ಪೇದೆಯ ದ್ವಿಚಕ್ರ ವಾಹನವನ್ನು ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಆರ್‌ಪಿಎಫ್ ಮಹಿಳಾ ಪೊಲೀಸ್ ಪೇದೆ, ಪೊಲೀಸರ ವಿರುದ್ಧ ರೇಗಾಡಿದ್ದಾರೆ. ಅಲ್ಲದೇ, ನೋಪಾರ್ಕಿಂಗ್ ಅಂತ ಎಲ್ಲಿ ಬೋರ್ಡ್ ಹಾಕಿದ್ದೀರಿ ತೋರಿಸಿ? ನನ್ನ ಬೈಕನ್ನು ಹೇಗೆ ವಾಹನದಲ್ಲಿ ಹಾಕಿಕೊಂಡಿದ್ದೀರಿ? ಎಂದೆಲ್ಲಾ ಹೇಳಿ ಕೆಳಗೆ ಬೈಕ್ ಇಳಿಸುವಂತೆ ಗರಂ ಆದ್ರು.
ಆರ್‌ಪಿಎಫ್ ಪೇದೆ ಆವಾಜ್‌ಗೆ ಬೆದರಿದ ಸಂಚಾರಿ ಪೊಲೀಸರು ಬೈಕ್ ಕೆಳಗಿಳಿಸಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದ ಸಾರ್ವಜನಿಕರು ತಮ್ಮ ಕ್ಯಾಮರಾದಲ್ಲಿ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ. ಹಾಗಾಗಿ 'ಇವರಿಗೊಂದು ಕಾನೂನು, ನಮಗೊಂದು ಕಾನೂನು' ಅಂತ ಪ್ರಶ್ನಿಸಿದ ಸಾರ್ವಜನಿಕರು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.