ಹುಬ್ಬಳ್ಳಿ: ಬಾಕ್ಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಪಿಎಫ್ ಡಿಜಿ ಅರುಣ ಕುಮಾರ ಚೌರಾಸಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆದ್ರೆ ಈವರೆಗೆ ಯಾರ ಮೇಲೂ ಎಫ್ಐಆರ್ ದಾಖಲಿಸಿಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ ಬಾಕ್ಸ್ ಸ್ಫೋಟಕ್ಕೂ ಮಹಾ ಚುನಾವಣೆಗೂ ಇದ್ಯಾ ನಂಟು? ಡಿಜಿ ಹೇಳಿದ್ದೇನು?
ಪ್ರಕರಣದಲ್ಲಿ ಮಹಾರಾಷ್ಟ್ರ ಶಾಸಕರೊಬ್ಬರ ಹೆಸರು ಕೇಳಿ ಬರುತ್ತಿದ್ದು, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಆರ್ಪಿಎಫ್ ಡಿಜಿ ಅರುಣ ಕುಮಾರ ಚೌರಾಸಿ ತಿಳಿಸಿದರು.
ನಗರದ ರೈಲ್ವೇ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟಗೊಂಡ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮರಳಿನ ಚೀಲಗಳಲ್ಲಿ ಮುಚ್ಚಿ ಹಾಕಲಾಗಿರುವ ಬಾಕ್ಸ್‌ಗಳಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಅದ್ರಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ಕೊಲ್ಹಾಪುರದಿಂದ ಬರುವ ತಂಡ ಸಮಗ್ರ ತನಿಖೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ ಮಹಾರಾಷ್ಟ್ರ ಶಾಸಕರೊಬ್ಬರ ಹೆಸರು ಥಳಕು ಹಾಕಿಕೊಂಡಿದ್ದು, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ ಮಹಾರಾಷ್ಟ್ರ ಚುನಾವಣೆಗೂ ಇದಕ್ಕೂ ಸಂಬಂಧ ಇದೆ ಎಂಬ ಬಗ್ಗೆ ತನಿಖೆ ನಡೆಸಿದ ನಂತರವೇ ಸತ್ಯ ಗೊತ್ತಾಗಲಿದೆ. ಈವರೆಗೆ ಯಾರ ಮೇಲೂ ಕೇಸ್ ದಾಖಲಿಸಿಲ್ಲ ಮತ್ತು ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.