ಕರ್ನಾಟಕ

karnataka

ETV Bharat / state

ಮಳೆಗೆ ಕೆಸರು ಗದ್ದೆಯಾದ ರಸ್ತೆ: ಅಧಿಕಾರಿಗಳ ವಿರುದ್ಧ ಕುಸುಗಲ್​ ನಿವಾಸಿಗಳ ಆಕ್ರೋಶ - Kusugal village of Hubli

ಹುಬ್ಬಳ್ಳಿಯ ಕುಸುಗಲ್ ಗ್ರಾಮದಲ್ಲಿ ಭಾರೀ ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಾಡಾಗಿವೆ.

dss
ಮಳೆಗೆ ಕೆಸರು ಗದ್ದೆಯಾದ ರಸ್ತೆ

By

Published : Sep 23, 2020, 9:27 AM IST

ಹುಬ್ಬಳ್ಳಿ: ಭಾರೀ ಮಳೆಯಿಂದಾಗಿ ರಸ್ತೆಗಳು ಕೆಸರುಮಯವಾಗಿರುವುದಕ್ಕೆ ತಾಲೂಕಿನ ಕುಸುಗಲ್ ನಿವಾಸಿಗಳು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗೆ ಕೆಸರು ಗದ್ದೆಯಾದ ರಸ್ತೆ

ಗ್ರಾಮದ ವಾರ್ಡ್ ನಂಬರ್ 6ರ‌ ಕಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ರಸ್ತೆ ಹಾಳಾಗಿದ್ದರು ಸಹ ಪಂಚಾಯತಿ ಅಧಿಕಾರಿಗಳು ಸುಗಮ ರಸ್ತೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಎಲ್ಲಿ ಕಾಲು ಜಾರಿ ಬೀಳುತ್ತೇವೆ ಎಂಬ ಭಯದಿಂದ ಸಂಚರಿಸುತ್ತಿದ್ದಾರೆ.

ಬೇಸಿಗೆ ವೇಳೆ ಸುಗಮ ರಸ್ತೆ ‌ಮಾಡಿ‌ ಎಂದು ಮನವಿ ಮಾಡಿದರು ಸಹ ಯಾವುದೇ ‌ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡದೆ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details