ಕಲಘಟಗಿ:ತಾಲೂಕಿನಲ್ಲಿ ಸತತ ಮೂರು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದು, ಬಿಸರಳ್ಳಿ- ಹಿರೆಹೊನ್ನಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ.
ಕಲಘಟಗಿಯಲ್ಲಿ ಮಳೆಯ ಅಬ್ಬರ: ರಸ್ತೆ ಸಂಚಾರ ಸ್ಥಗಿತ - ಕಲಘಟಗಿ
ಕಲಘಟಗಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಇಲ್ಲಿನ ಜನತೆಗೆ ಪೊಲೀಸರು ಸೂಚನೆ ನೀಡಿದ್ದಾರೆ.
ಕಲಘಟಗಿಯಲ್ಲಿ ಮಳೆ
ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ರಸ್ತೆ ಸಂಪರ್ಕ ಬಂದ್ ಆಗಿದೆ. ಇನ್ನು ಮುಂಜಾಗೃತ ಕ್ರಮ ಕೈಗೊಂಡಿರುವ ಪೊಲೀಸರು, ಬಿಸರಳ್ಳಿ- ಹಿರೆಹೊನ್ನಳ್ಳಿ ರಸ್ತೆಯಲ್ಲಿ ಜನರು ಸಂಚಾರ ಮಾಡದಂತೆ ಕ್ರಮಕೈಗೊಂಡಿದ್ದಾರೆ.
ಅಷ್ಟೇ ಅಲ್ಲದೆ, ಮಳೆ ಪ್ರಮಾಣ ಕಡಿಮೆ ಆಗುವವರೆಗೂ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರುವಂತೆ ಪೋಲೀಸರು ಸೂಚಿಸಿದ್ದಾರೆ.