ಹುಬ್ಬಳ್ಳಿ:ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ನವನಗರದ ಎಪಿಎಂಸಿ ಬಳಿಯ ಈಶ್ವರ ನಗರದ ಹತ್ತಿರ ಸಂಭವಿಸಿದೆ.
ಬೈಕ್ ಸವಾರನ ಅಜಾಗರೂಕ ಚಾಲನೆ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ದುರ್ಮರಣ - ಹುಬ್ಬಳ್ಳಿ ಅಪರಾಧ ಸುದ್ದಿ
ರಸ್ತೆ ದಾಟುತ್ತಿದ್ದಾಗ ಯಮನಂತೆ ವೇಗವಾಗಿ ಬಂದಪ್ಪಳಿಸಿದ ಬೈಕ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಇಲ್ಲಿನ ನವನಗರದ ಎಪಿಎಂಸಿ ಬಳಿಯ ಈಶ್ವರ ನಗರದ ಹತ್ತಿರ ಸಂಭವಿಸಿದೆ.
ಹುಬ್ಬಳ್ಳಿ ಬೈಕ್ ಅಪಘಾತ ಮಹಿಳೆ ಸಾವು ಸುದ್ದಿ
ಸಾವಿತ್ರಿ ಶೇಖಪ್ಪ ಮುಗದ (38) ಎಂಬುವರು ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಇವರು ತನ್ನ ಮಗಳೊಂದಿಗೆ ಈಶ್ವರನಗರದಿಂದ ಎಪಿಎಂಸಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ನವನಗರ ಕಡೆಯಿಂದ ಬಂದ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್ ಮಹಿಳೆಯ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.