ಕರ್ನಾಟಕ

karnataka

ETV Bharat / state

ಭೀಕರ ರಸ್ತೆ ಅಪಘಾತ: ಚಿಕಿತ್ಸೆಗೆ ಎಂದು ಹೊರಟು ಚಿರನಿದ್ರೆಗೆ ಜಾರಿದ ನಾಲ್ವರು - ಅಣ್ಣಿಗೇರಿ ಬಳಿ ಭೀಕರ ರಸ್ತೆ ಅಪಘಾತ ನಾಲ್ವರು ಸಾವು

ಗದಗ ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ಕಾರು ಮತ್ತು ಕ್ರೂಸರ್​ ವಾಹನದ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Road accident four people die in Hubli
ಭೀಕರ ರಸ್ತೆ ಅಪಘಾತ

By

Published : Nov 25, 2020, 9:35 AM IST

Updated : Nov 25, 2020, 9:52 AM IST

ಹುಬ್ಬಳ್ಳಿ: ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಸಾವನ್ನಪ್ಪಿರುವ ಘಟನೆ ಗದಗ ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ನಡೆದಿದೆ.

ಕಾರು ಮತ್ತು ಕ್ರೂಸರ್​ ವಾಹನದ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಣ್ಣಗಂಗಣ್ಣ, ನಾಗಮ್ಮ , ಹನುಮಂತು, ಈರಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಣ್ಣೀರಣ್ಣ ಮತ್ತು ಲಕ್ಷ್ಮೀ ಹಾಗೂ ಕ್ರೂಸರ್ ನ ಚಾಲಕ ಮಲ್ಲಪ್ಪ ಗಿಡ್ಡನ್ನವರ ಅವರಿಗೆ ತೀವ್ರ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೂಸರ್ ಚಾಲಕನ ನಿರ್ಲಕ್ಷ್ಯ ದಿಂದ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಮೃತರು ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾಗಿದ್ದು, ಮಾನ್ವಿಯಿಂದ ಕಾರವಾರದ ಹಳಗಾಕ್ಕೆ ಪಾರ್ಶ್ವವಾಯು ಚಿಕಿತ್ಸೆಗೆ ಹೊರಟಿದ್ದರು. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated : Nov 25, 2020, 9:52 AM IST

For All Latest Updates

ABOUT THE AUTHOR

...view details