ಕರ್ನಾಟಕ

karnataka

ETV Bharat / state

ಸಾಲ ತೀರಿಸುವಂತೆ ರೈತರಿಗೆ ಬ್ಯಾಂಕ್ ಕಿರುಕುಳ ಆರೋಪ: ಆರ್​ಕೆಸ್ ಸಂಘಟನೆ​ ಪ್ರತಿಭಟನೆ

ಕೊರೊನಾ ಲಾಕ್​ಡೌನ್​ನಿಂದ ಸುಧಾರಿಸಿಕೊಳ್ಳುತ್ತಿರುವ ರೈತ ಸಮುದಾಯಕ್ಕೆ ಬೆಳೆ ಸಾಲ ತೀರಿಸುವಂತೆ ಬ್ಯಾಂಕ್​ಗಳು ತೊಂದರೆ ನೀಡುತ್ತಿವೆ ಎಂದು ಆರೋಪಿಸಿ ಧಾರವಾಡ ಜಿಲ್ಲೆಯಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿದೆ.

By

Published : Jan 16, 2021, 9:11 PM IST

dsd
ಆರ್​ಕೆಸ್ ಸಂಘಟನೆ​ ಪ್ರತಿಭಟನೆ

ಧಾರವಾಡ: ರೈತರ ಮೇಲೆ ಬ್ಯಾಂಕ್​ಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ತಾಲೂಕಿನ ತೇಗೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆರ್​ಕೆಸ್ ಸಂಘಟನೆ​ ಪ್ರತಿಭಟನೆ

ಕಳೆದ ಆರು ತಿಂಗಳಿನಿಂದ ಲಾಕ್​ಡೌನ್ ಆಗಿ​ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ರೈತ ಸಮುದಾಯ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭ ಬ್ಯಾಂಕ್​ನಿಂದ ರೈತರಿಗೆ ಬೆಳೆ ಸಾಲ ತೀರಿಸುವಂತೆ ಒತ್ತಾಯಿಸುತ್ತಿರುವುದು ಅತ್ಯಂತ ಖಂಡನೀಯ. ಗಂಡನ ಹೆಸರಿನಲ್ಲಿ ಬೆಳೆ ಸಾಲ ಮಾಡಲಾಗಿದ್ದು, ಹೆಂಡತಿಯ ಖಾತೆಗೆ ಜಮೆ ಆಗಿರುವ ಗುಂಪು ಹಣವನ್ನು ಬೆಳೆ ಸಾಲಕ್ಕೆ ತುಂಬಿಕೊಂಡಿರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಅಪ್ಪನ ಹೆಸರಿನಲ್ಲಿ ಬೆಳೆಸಾಲ ಮಾಡಲಾಗಿದ್ದು, ಮಗನ ಖಾತೆಗೆ ಜಮೆ ಆಗಿರುವ ಕಬ್ಬಿನ ಬಿಲ್​ ಹಣವನ್ನು ಬೆಳೆ ಸಾಲಕ್ಕೆ ವಜಾ ಮಾಡಲಾಗಿದೆ. ಈ ರೀತಿಯಾಗಿ ಬ್ಯಾಂಕ್​ನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಪರಿಹರಿಸಬೇಕು ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.

ABOUT THE AUTHOR

...view details