ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಅವಳಿನಗರದಲ್ಲಿ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಬರುವ ಬದಲು ಬಸ್ ನಿಲ್ದಾಣಗಳೇ ಸಾರ್ವಜನಿಕರ ಅನುಕೂಲತೆಗೆ ತಕ್ಕಂತೆ ಪರಿಷ್ಕೃತ ನಿಲುಗಡೆ ನಿರ್ಮಾಣ ಮಾಡಲು ಹು-ಧಾ ನಗರ ಸಾರಿಗೆ ಇಲಾಖೆ ಮುಂದಾಗಿದೆ.
ಹೌದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಹಾಗೂ ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ನಗರದ ಟ್ರಾಫಿಕ್ ಜಾಮ್ ತಡೆಗಟ್ಟುವಂತೆ ನೀಡಿದ ನಿರ್ದೇಶದನ್ವಯ ಪೊಲೀಸ್ ಇಲಾಖೆಯ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ವಾ.ಕ.ರ.ಸಾ.ಸಂಸ್ಥೆಯ ಸಿಬ್ಬಂದಿ ಜಂಟಿಯಾಗಿ ಮಾರ್ಗ ಸಮೀಕ್ಷೆ ಮಾಡಿ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಿಗ್ನಲ್ ಹತ್ತಿರದ ಕೆಲವು ನಿಲುಗಡೆಗಳನ್ನು ಸ್ಥಳಾಂತರಗೊಳಿಸಿದ್ದು, ಅದರನ್ವಯ ಈಗಾಗಲೇ ಪರಿಷ್ಕೃತ ನಿಲುಗಡೆ ಸ್ಥಳಗಳಲ್ಲಿ ಬೋರ್ಡ್ ಅಳವಡಿಸಲಾಗಿದೆ.