ಕರ್ನಾಟಕ

karnataka

ETV Bharat / state

ಮಲ್ಕಾಪುರೆ ರಾಜೀನಾಮೆ ಪಡೆದರೆ ಕುರುಬ ಸಮಾಜಕ್ಕೆ ತಪ್ಪು ಸಂದೇಶ: ರೇವಣಸಿದ್ದೇಶ್ವರ ಶ್ರೀ ಎಚ್ಚರಿಕೆ

ರಘುನಾಥ ಮಲ್ಕಾಪುರೆ ಅವರನ್ನು ವಿಧಾನಸಭೆ ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಯೋಗ್ಯ ಸ್ಥಾನ ನೀಡಬೇಕು ಎಂದು ಬಸವರಾಜ್ ದೇವರು ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

Basavaraj devaru Swamiji
ಬಸವರಾಜ್ ದೇವರು ಸ್ವಾಮೀಜಿ

By

Published : Nov 25, 2022, 3:20 PM IST

ಹುಬ್ಬಳ್ಳಿ:ವಿಧಾನ ಪರಿಷತ್ ಸಭಾಪತಿ ರಘುನಾಥ್ ಮಲ್ಕಾಪುರೆ ಅವರ ರಾಜೀನಾಮೆ ಪಡೆಯುವುದು ಸರಿಯಲ್ಲ. ಒಂದು ವೇಳೆ ರಾಜೀನಾಮೆ ಪಡೆಯುವದಾದರೆ, ಪಕ್ಷದಿಂದ ಕುರುಬ ಸಮಾಜಕ್ಕೆ ಬೇರೆ ಸಂದೇಶ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಲ್ಕಾಪುರೆ ಅವರನ್ನೇ ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಮನಸೂರ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಘುನಾಥ್ ರಾವ್ ಮಲ್ಕಾಪುರೆ ಅವರ ರಾಜೀನಾಮೆ ಪಡೆಯುವುದರಿಂದ ಸಮಾಜಕ್ಕೆ ಬೇರೆ ಸಂದೇಶ ಹೋಗಬಾರದು. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕುರುಬ ಸಮಾಜ ನಾಯಕರಿಗೆ ಸೂಕ್ತ ಸ್ಥಾನ ಮಾನ ಕೊಡಬೇಕು ಎಂದ ಅವರು, ರಘುನಾಥ ಮಲ್ಕಾಪುರೆ ಅವರನ್ನು ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು ಇಲ್ಲದಿದ್ದರೆ ಯೋಗ್ಯ ಸ್ಥಾನ ನೀಡಬೇಕು ಎಂದು ಹೇಳಿದರು.

ಇನ್ನೂ ಮಾಜಿ ಸಚಿವ ಈಶ್ವರಪ್ಪ ಅವರ ರಾಜೀನಾಮೆಯನ್ನು ಈಗಾಗಲೇ ಪಡೆಯಲಾಗಿದೆ. ಇಲ್ಲಿ ಸಹ ಸಮಾಜಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಯಾವುದೇ ಪ್ರಸಂಗದಲ್ಲೂ ಈಗ ರಘುಪತಿ ಮಲ್ಕಾಪುರೆ ಅವರ ರಾಜೀನಾಮೆ ಪಡೆಯುವುದು ಒಂದು ಸಮುದಾಯಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್​​ಗಳು ತಾತ್ಕಾಲಿಕ ಸ್ಥಗಿತ!

ABOUT THE AUTHOR

...view details