ಹುಬ್ಬಳ್ಳಿ : ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಎಂಬುವವರೇ ವಂಚನೆಗೊಳಗಾದವರು.
ವಿರೂಪಾಕ್ಷಪ್ಪ ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾಗ, ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆಯ ವಿವೇಕಾನಂದ ನಗರದ ಈರಪ್ಪ ಬೂದಿಹಾಳ ಎಂಬುವವರು ಪರಿಚಯವಾಗಿದ್ದರು. ಇವರಿಬ್ಬರು ಸೇರಿ ವಿರೂಪಾಕ್ಷಪ್ಪ ಅವರಿಗೆ ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿದ್ದರು ಎನ್ನಲಾಗ್ತಿದೆ.