ಕರ್ನಾಟಕ

karnataka

ETV Bharat / state

ಎಸ್ಎಸ್​ಎಲ್​ಸಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹ: ಜಾಗಟೆ ಬಾರಿಸಿ ವಾಟಾಳ್​ ಪ್ರತಿಭಟನೆ - Hubli latest protest news

ಎಸ್ಎಸ್​ಎಲ್​ಸಿ ಪರೀಕ್ಷೆ ಹಾಗೂ ಆನ್​​ಲೈನ್ ಶಿಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಿ ವಾಟಾಳ್​ ನಾಗರಾಜ್​ ಜಾಗಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Vatal Nagaraj  protest
ಜಾಗಟೆ ಬಾರಿಸಿ ವಾಟಾಳ್​ ನಾಗರಾಜ ಪ್ರತಿಭಟನೆ

By

Published : Jun 13, 2020, 6:13 PM IST

ಹುಬ್ಬಳ್ಳಿ: ಎಸ್ಎಸ್​ಎಲ್​ಸಿ ಪರೀಕ್ಷೆ ಹಾಗೂ ಆನ್​​ಲೈನ್ ಶಿಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಿ ಕನ್ನಡ ವಾಟಾಳ್​ ಪಕ್ಷದ ವಾಟಾಳ್​ ನಾಗರಾಜ್​ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಾಗಟೆ ಬಾರಿಸಿ ವಾಟಾಳ್​ ನಾಗರಾಜ್​ ಪ್ರತಿಭಟನೆ
ನಗರದ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಾಗೂ ಜಾಗಟೆ ಬಾರಿಸುವ ಮೂಲಕ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರ ಎಸ್ಎಸ್​ಎಲ್​ಸಿ ಪರೀಕ್ಷೆ ನಡೆಸಲು ಹೊರಟಿರುವುದು ಮೂರ್ಖತನದ ಪರಮಾವಧಿ. ಮಕ್ಕಳ ಜೀವದ ಜೊತೆಗೆ ಸರ್ಕಾರ ಆಟ ಆಡುವುದನ್ನು ನಿಲ್ಲಿಸಬೇಕು. ಅನ್ಯ ರಾಜ್ಯಗಳಂತೆ ಎಸ್ಎಸ್​ಎಲ್​ಸಿ ಪರೀಕ್ಷೆ ಹಾಗೂ ಆನ್‌ಲೈನ್‌ ಶಿಕ್ಷಣವನ್ನು ರದ್ದುಗೊಳಿಬೇಕೆಂದು ಅವರು ಆಗ್ರಹಿಸಿದರು.

ABOUT THE AUTHOR

...view details