ಕರ್ನಾಟಕ

karnataka

By

Published : Apr 20, 2020, 11:36 PM IST

ETV Bharat / state

ಧಾರವಾಡದಲ್ಲಿ ಒಂದೇ ದಿನ 166 ಶಂಕಿತರು ಪತ್ತೆ.. ಹೆಚ್ಚಿದ ದುಗುಡ

ಧಾರವಾಡದಲ್ಲಿ ಸೋಮವಾರ 11 ಜನರ ವರದಿ ನೆಗೆಟಿವ್​ ಎಂದು ಬಂದಿದೆ. 24 ಗಂಟೆಯಲ್ಲಿ 166 ಜನರಲ್ಲಿ ಕೊರೊನಾ ಗುಣಲಕ್ಷಣ ಕಂಡುಬಂದಿದೆ.

ಕೊರೊನಾ
ಕೊರೊನಾ

ಧಾರವಾಡ:ಜಿಲ್ಲೆಯ ಕೊರೊನಾ ಬುಲೆಟಿನ್ ಬಿಡುಗಡೆಗೊಂಡಿದ್ದು, 11 ಶಂಕಿತರ ವರದಿ ನೆಗೆಟಿವ್ ಬಂದಿದೆ.

ಭಾನುವಾರದವರೆಗೆ ದಾಖಲಾಗಿದ್ದ, ಒಟ್ಟು 101 ಶಂಕಿತರ ಪೈಕಿ 11 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇಂದು 24 ಗಂಟೆಯಲ್ಲಿ 166 ಜನರಲ್ಲಿ ಕೊರೊನಾ ಗುಣಲಕ್ಷ್ಮಣಗಳು ಪತ್ತೆಯಾಗಿವೆ.

ಕೊರೊನಾ ಬುಲೆಟಿನ್ ಬಿಡುಗಡೆ

ನಿನ್ನೆ ದಾಖಲಾಗಿದ್ದವರಲ್ಲಿ 90 ಶಂಕಿತರ ವರದಿ ಬರಬೇಕಾಗಿದೆ. ಒಟ್ಟು 256 ಶಂಕಿತರ ವರದಿ ಬಾಕಿಯಿದೆ. 7 ಜನರನ್ನು ಐಸೋಲೇಷನ್​​ನಲ್ಲಿ ಇಡಲಾಗಿದೆ. ‌ಇಲ್ಲಿಯವರೆಗೆ ಒಟ್ಟು 1,557 ಜನರ ಮೇಲೆ‌ ನಿಗಾವಹಿಸಲಾಗಿದೆ.

840 ಜನರನ್ನು 14 ದಿನಗಳ ಹೋಮ್ ಐಸೋಲೇಷನ್​ನಲ್ಲಿ ಇಡಲಾಗಿದೆ. 36 ಜನರ 14 ದಿನಗಳ ಐಸೋಲೇಷನ್ ಪೂರ್ಣವಾಗಿದ್ದು, 674 ಜನರ 28 ದಿನಗಳ ಐಸೋಲೇಷನ್​​​ ಪೂರ್ಣಗೊಂಡಿದೆ.

ABOUT THE AUTHOR

...view details