ಕರ್ನಾಟಕ

karnataka

ETV Bharat / state

ಎನ್​​ಡಬ್ಲ್ಯೂಕೆಎಸ್‌ಆರ್​​ಟಿಸಿಯಿಂದ ಮಳಿಗೆಗಳ ಪರವಾನಗಿ ಶುಲ್ಕ ವಿನಾಯಿತಿ - Hubballi city news

ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಕುಂದಗೋಳ, ಸಂಶಿ, ತಡಸ, ಕಲಘಟಗಿ, ಹೆಬಸೂರು, ನವಲಗುಂದ ಮತ್ತು ಅಣ್ಣಿಗೇರಿ ಬಸ್ ನಿಲ್ದಾಣಗಳಲ್ಲಿ ಒಟ್ಟು 82 ವಾಣಿಜ್ಯ ಮಳಿಗೆಗಳಿವೆ.

relaxation for rent payment
ಮಳಿಗೆಗಳು

By

Published : Jul 17, 2020, 4:06 PM IST

Updated : Jul 17, 2020, 5:05 PM IST

ಹುಬ್ಬಳ್ಳಿ :ವಾಣಿಜ್ಯ ಮಳಿಗೆದಾರರು, ಜಾಹೀರಾತು ಪರವಾನಗಿದಾರರು ಮತ್ತು ಹೋಟೆಲ್​ ಮಾಲೀಕರು ಮಾಸಿಕ ಶುಲ್ಕ ಪಾವತಿಸುವುದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ‌ಹುಬ್ಬಳ್ಳಿ ಘಟಕ ವಿನಾಯಿತಿ ನೀಡಿದೆ.

ಲಾಕ್​​ಡೌನ್ ಜಾರಿಯಾದ ಮಾರ್ಚ್ 22ರಿಂದ ಮೇ 18ರವರೆಗೆ ಸಾರಿಗೆ ಸಂಸ್ಥೆ ಬಸ್​​ಗಳ ಸಂಚಾರ ಸ್ಥಗಿತಗೊಂಡಿತ್ತು. ಆಗ ಮಳಿಗೆಗಳು,ಹೋಟೆಲ್​ಗಳೂ ಬಂದ್​ ಆಗಿದ್ದವು. ಹೀಗಾಗಿ, ಅವರಿಗೆ ತೊಂದರೆಯಾಗದಂತೆ ಮಾನವೀಯತೆಯ ದೃಷ್ಟಿಯಿಂದ ಮೇ 18ರ ಬದಲಿಗೆ ಮೇ 31ರವರೆಗೆ (ಹೆಚ್ಚುವರಿಯಾಗಿ) ಪರವಾನಿಗೆ ಶುಲ್ಕ ಪಾವತಿಸಲು ವಿನಾಯಿತಿ ನೀಡಿದೆ.

ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಕುಂದಗೋಳ, ಸಂಶಿ, ತಡಸ, ಕಲಘಟಗಿ, ಹೆಬಸೂರು, ನವಲಗುಂದ ಮತ್ತು ಅಣ್ಣಿಗೇರಿ ಬಸ್ ನಿಲ್ದಾಣಗಳಲ್ಲಿ ಒಟ್ಟು 82 ವಾಣಿಜ್ಯ ಮಳಿಗೆಗಳಿವೆ. ಈ ಮಳಿಗೆಗಳ ಮತ್ತು ಜಾಹೀರಾತು ಪರವಾನಿಗಿದಾರರಿಗೆ ಮಾರ್ಚ್​​​ನಲ್ಲಿ ₹12.04 ಲಕ್ಷ, ಏಪ್ರಿಲ್​​​ನಲ್ಲಿ ₹35.83 ಲಕ್ಷ, ಮೇನಲ್ಲಿ ₹ 35.83 ಲಕ್ಷ, ಒಟ್ಟು ₹ 83.70 ಲಕ್ಷ ವಿನಾಯಿತಿ ನೀಡಲಾಗಿದೆ.

ವಾಯುವ್ಯ ಕರ್ನಾಟಕ ಸಂಸ್ಥೆ ನಿಯಂತ್ರಣಾಧಿಕಾರಿ (ಗ್ರಾಮೀಣ) ರಾಮನಗೌಡರ

ಜೂನ್ ಮತ್ತು ಜುಲೈ ತಿಂಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಸಂಚರಿಸಿದ ಬಸ್​​ಗಳ ಸಂಖ್ಯೆಗನುಗುಣವಾಗಿ ಮಾಸಿಕ ಪರವಾನಿಗೆ ಶುಲ್ಕವನ್ನು (ತಿಂಗಳ ಬಾಡಿಗೆ) ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಂಸ್ಥೆ ನಿಯಂತ್ರಣಾಧಿಕಾರಿ (ಗ್ರಾಮೀಣ) ರಾಮನಗೌಡರ ಹೇಳಿದರು.

Last Updated : Jul 17, 2020, 5:05 PM IST

ABOUT THE AUTHOR

...view details