ಕರ್ನಾಟಕ

karnataka

ETV Bharat / state

ರೈತರ ಜೀವನಕ್ಕೆ ಹೊಸ ರೂಪ ನೀಡಲು ಸಿದ್ಧರಾಗಿ: ಕೃಷಿ ವಿಜ್ಞಾನಿಗಳಿಗೆ ಸಚಿವ ಮುನೇನಕೊಪ್ಪ ಕರೆ - Minister Shankara Patil Munenakoppa held a meeting at Agricultural University, Dharwad

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಹತ್ವದ ಸಭೆ ನಡೆಸಿದರು. ಈ ವೇಳೆ ಅವರು ರೈತರ ಜೀವನಕ್ಕೆ ಹೊಸ ರೂಪ ನೀಡಲು ಮುಂದಾಗಬೇಕೆಂದು ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡರು.

Ready to improve farmers life says Minister Shankara Patil
ಕೃಷಿ ವಿಜ್ಞಾನಿಗಳಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕರೆ

By

Published : Jan 31, 2022, 10:49 PM IST

ಧಾರವಾಡ:ರೈತರ ಜೀವನಕ್ಕೆ ಅನುಕೂಲವಾಗುವ ಬೆಳೆ ಮತ್ತು ಇಳುವರಿ ಬಗ್ಗೆ ಸಂಶೋಧನೆ ಮಾಡುವ ಮೂಲಕ ರೈತರ ಜೀವನಕ್ಕೆ ಹೊಸ ರೂಪ ನೀಡಲು ಮುಂದಾಗಬೇಕೆಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಿಜ್ಞಾನಿಗಳಿಗೆ ಮನವಿ ಮಾಡಿದರು.

ಕೃಷಿ ವಿಶ್ವವಿದ್ಯಾಲಯದ ಬಟ್ಟೆ ಹಾಗೂ ಸಿದ್ಧ ಉಡುಪು ಸಂಶೋಧನಾ ಕೇಂದ್ರಕ್ಕೆ ಭೇಟಿ

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಭೆ ನಡೆಸಿದ ಅವರು, ಡಿಸಿಎಚ್ ಮತ್ತು ವರಲಕ್ಷ್ಮೀ ಹತ್ತಿಯನ್ನ ಬೆಳೆಯುವುದು ಸಂಪೂರ್ಣವಾಗಿ ನಿಂತು ಹೋಗಿದೆ. ಇದಕ್ಕೆ ಕಾರಣವಾಗಿದ್ದು, ಇಳುವರಿ ಕಡಿಮೆ ಬರುವುದಾಗಿದೆ. ಈ ಎರಡು ತಳಿಗಳು ಮತ್ತೆ ಬೆಳೆಯುವಂತಾಗಬೇಕು ಎಂದ ಸಚಿವರು, ಇದಕ್ಕೆ ಬೇಕಾದ ಸೌಲಭ್ಯವನ್ನ ಸರ್ಕಾರ ನೀಡಲಿದೆ ಎಂದು ಸಚಿವರು ಹೇಳಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಹತ್ವದ ಸಭೆ

ಕೃಷಿ ವಿಶ್ವವಿದ್ಯಾಲಯ ಇಲ್ಲಿಯವರೆಗೆ ಹತ್ತಿ ಹಾಗೂ ಜವಳಿ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನ ನೀಡಿದೆ. ಇದನ್ನ ಸ್ಮರಿಸಿಕೊಂಡು ಇನ್ನಷ್ಟು ಉತ್ತಮ ಸಾಧನೆಯನ್ನ ಮಾಡಬೇಕೆಂದು ಸಚಿವರು ಕೋರಿದರು.

ಬಣ್ಣದ ಬಣ್ಣದ ಹತ್ತಿಯನ್ನ ಬೆಳೆಯಲು ರೈತರಿಗೆ ಪ್ರೇರೆಪಣೆ ನೀಡುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಬಣ್ಣದ ಹತ್ತಿಯಿಂದ ಸಿದ್ಧ ಉಡುಪು ತಯಾರಿಸಿ ಉಪಯೋಗಿಸಬೇಕು. ಜೊತೆಗೆ ಬೇರೆ ದೇಶಗಳಿಗೆ ಕಳಿಸುವಂತಾಗಬೇಕು. ಇದರಿಂದ ರೈತರಿಗೆ ಮತ್ತು ನೇಕಾರರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಹತ್ವದ ಸಭೆ

ಇದನ್ನೂ ಓದಿ:'ನನ್ನ ಪತ್ನಿಗೆ ಹೆರಿಗೆ ಸೂಸುತ್ರವಾಗಲಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲಿ'.. ಅಂಜನಾದ್ರಿಯ ಹನುಮನಿಗೆ ಭಕ್ತನ ಪತ್ರ!

ರೈತರಿಗೆ ಅನುಕೂಲವಾಗುವ ಪ್ರತಿಯೊಂದು ನಿಟ್ಟಿನಲ್ಲಿಯೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಯತ್ನಿಸಬೇಕು. ಸರ್ಕಾರ ಸದಾಕಾಲ ರೈತರ ಪರವಾಗಿ ನಿಲ್ಲತ್ತೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.

ಕೃಷಿ ವಿಶ್ವವಿದ್ಯಾಲಯದ ಬಟ್ಟೆ ಹಾಗೂ ಸಿದ್ಧ ಉಡುಪು ಸಂಶೋಧನಾ ಕೇಂದ್ರಕ್ಕೆ ಭೇಟಿ

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಬಿ.ಚೆಟ್ಟಿ, ವಿ.ವಿ.ಕಾಗವಾಡ, ಯೋಗೀಶ ಸಿ.ಎಸ್, ಶಾಮಣ್ಣ, ಸಿ.ಎಸ್.ಫಡಕೆ, ಎಸ್.ಐ.ಸಣ್ಣಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಯ ನಂತರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೃಷಿ ವಿಶ್ವವಿದ್ಯಾಲಯದ ಬಟ್ಟೆ ಹಾಗೂ ಸಿದ್ಧ ಉಡುಪು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ನೈಸರ್ಗಿಕ ಬಣ್ಣದ ಬಟ್ಟೆಗಳ ಉತ್ಪಾದನೆಯನ್ನ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details