ಹುಬ್ಬಳ್ಳಿ :ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಗುಣಮಟ್ಟದ ಆಹಾರ ನೀಡುವ ಬಿಸಿಯೂಟದ ಯೋಜನೆ ಈಗ ಮರೆಯಾಗಿದೆ. ಕೊರೊನಾ ಕಾಟದಿಂದ ಶಾಲೆಗಳಿಗೆ ಬೀಗ ಬಿದ್ದಿದೆ. ಆದ್ರೆ, ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗ ಮಕ್ಕಳ ಮನೆ ಬಾಗಿಲಿಗೆ ರೇಷನ್ ಒದಗಿಸುತ್ತಿದೆ.
ಈಗಾಗಲೇ ಸರ್ಕಾರದ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲಾಡಳಿತ ದಾಸ್ತಾನು ಮಾಡಿರುವ ರೇಷನ್‌ನ ಮಕ್ಕಳಿಗೆ ನೀಡುತ್ತಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಎಷ್ಟು ರೇಷನ್ ವಿತರಣೆ ಮಾಡಬೇಕು ಎಂಬ ಸರ್ಕಾರದ ನಿರ್ದೇಶನದಂತೆ ಅಕ್ಕಿ, ಬೇಳೆ, ಎಣ್ಣೆ ಹಾಗೂ ಉಪ್ಪು ಸೇರಿದಂತೆ ಎಲ್ಲ ಆಹಾರ ಪದಾರ್ಥಗಳನ್ನು ಮಕ್ಕಳ ಪೋಷಕರಿಗೆ ವಿತರಿಸಲಾಗುತ್ತಿದೆ.