ಕರ್ನಾಟಕ

karnataka

ETV Bharat / state

ಕೊರೊನಾ ಹೆಚ್ಚಳ: ರ‍್ಯಾಪಿಡ್ ಆ್ಯಂಟಿಜೆನ್​​ ಟೆಸ್ಟ್ ಪ್ರಾರಂಭಿಸಿದ ಧಾರವಾಡ ಜಿಲ್ಲಾಡಳಿತ - Coronavirus update

ಧಾರವಾಡ ಜಿಲ್ಲೆಯ ಜನಸಂದಣಿ ಪ್ರದೇಶಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಮೂಲಕ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪ್ರಾರಂಭಿಸಲಾಗಿದೆ.

Rapid Antigen Test
ರ್ಯಾಪಿಡ್ ಟೆಸ್ಟ್ ಪ್ರಾರಂಭ

By

Published : Jul 30, 2020, 1:19 PM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆ ಜನಸಂದಣಿ ಪ್ರದೇಶಗಳಲ್ಲಿ ಜಿಲ್ಲಾಡಳಿತ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಆರಂಭಿಸಿದೆ.

ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಮೂಲಕ ನಗರದ ಅಂಗಡಿಕಾರರು ಹಾಗೂ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ತಪಾಸಣೆಗೆ ಬಹುತೇಕರು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳು ಅವರ ಮನವೊಲಿಸಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ ಎನ್ನಲಾಗಿದೆ.

ರ‍್ಯಾಪಿಡ್ ಆ್ಯಂಟಿಜೆನ್​​ ಟೆಸ್ಟ್ ಪ್ರಾರಂಭಿಸಿದ ಜಿಲ್ಲಾಡಳಿತ

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಎಸಿ ಜುಬೇರ ಅಹ್ಮದ್, ತಹಶೀಲ್ದಾರ್​​ ಸಂತೋಷ ಬಿರಾದಾರ, ಎಸಿಪಿ‌ ಅನುಷಾ ಅವರು ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಸಿ ಟೆಸ್ಟ್ ಮಾಡಿಸುತ್ತಿದ್ದಾರೆ.

ABOUT THE AUTHOR

...view details