ಕರ್ನಾಟಕ

karnataka

ETV Bharat / state

ಧಾರವಾಡ: ಅತ್ಯಾಚಾರ ಸಂತ್ರಸ್ತ ಬಾಲಕಿ ಆತ್ಮಹತ್ಯೆಗೆ ಶರಣು - girlcommitted suicide

ಬಸೀರ್ ಗಡದಾರೆ ಎಂಬ ಕಾಮಾಂಧ ಕಳೆದ ಗುರುವಾರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಇದರಿಂದ ತೀವ್ರವಾಗಿ ಆಘಾತಕ್ಕೊಳಗಾದ ಬಾಲಕಿ ಶುಕ್ರವಾರ ಕ್ರಿಮಿನಾಶಕ ಕುಡಿದು ಸಾವಿಗೀಡಾಗಿದ್ದಾಳೆ.

A raped young girl who committed suicide
ಆತ್ಮಹತ್ಯೆಗೆ ಶರಣಾದ ಅತ್ಯಾಚಾರಗೊಂಡ ಅಪ್ರಾಪ್ತ ಬಾಲಕಿ

By

Published : Aug 2, 2020, 7:28 PM IST

ಧಾರವಾಡ: ಅತ್ಯಾಚಾರಗೊಂಡ ಬಾಲಕಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ತಾಲೂಕಿನಲ್ಲಿ ನಡೆದಿದೆ. ಬಸೀರ್ ಗಡದಾರೆ ಎಂಬ ಕಾಮಾಂಧ ಕಳೆದ ಗುರುವಾರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಇದರಿಂದ ಮಾನಸಿಕವಾಗಿ ತೀವ್ರವಾಗಿ ಆಘಾತಕ್ಕೊಳಗಾದ ಬಾಲಕಿ ಶುಕ್ರವಾರ ಕ್ರಿಮಿನಾಶಕ ಕುಡಿದು ಸಾವಿಗೀಡಾಗಿದ್ದಾಳೆ.

ಗುರುವಾರ ಹೊಲಕ್ಕೆ ಪೂಜೆ ಮಾಡಲು ಹೋಗಿದ್ದ ಬಾಲಕಿಯನ್ನು ಹೊತ್ತೊಯ್ದ ಬಸೀರ್ ಅತ್ಯಾಚಾರವೆಸಗಿದ್ದಾನೆ. ಈ ಘಟನೆಯ ಮಾರನೇ ದಿನವೇ ಕ್ರಿಮಿನಾಶಕ ಕುಡಿದು ನಡೆದ ಘಟನೆಯನ್ನು ಮನೆಯಲ್ಲಿ ಹೇಳಿದ್ದಾಳೆ.

ಬಾಲಕಿಯನ್ನು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸಲಿಲ್ಲ.

ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬಾಲಕಿಯ ಪೋಷಕರು ಒತ್ತಾಯಿಸಿದ್ದು, ಈ ಸಂಬಂಧಿಸಿದಂತೆ ಗರಗ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details