ಹುಬ್ಬಳ್ಳಿ:ನಿಸರ್ಗಚಂಡಮಾರುತದಪರಿಣಾಮದಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿನ್ನೆಯಿಂದ ತುಂತುರು ಮಳೆ ಸುರಿಯುತ್ತಿದೆ. ಮಳೆ ಶುರುವಾದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಸುರಿಯುತ್ತಿರುವ ವರುಣ: ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜು - ವಾಣಿಜ್ಯ ನಗರಿ ಹುಬ್ಬಳ್ಳಿ
ಸೈಕ್ಲೋನ್ ಪರಿಣಾಮದಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮುಂಗಾರು ಆಗಮನವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ವಾಣಿಜ್ಯ ನಗರಿಯಲ್ಲಿ ಸುರಿಯುತ್ತಿರುವ ವರುಣ: ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿರುವ ರೈತರು
ನಿನ್ನೆ ಇಡೀ ದಿನ ಸುರಿದ ಮಳೆ ರಸ್ತೆ ಸಂಚಾರಕ್ಕೆ ತಡೆ ಉಂಟುಮಾಡಿತ್ತು. ಇಂದೂ ಕೂಡ ಮುಂದುವರೆದಿರುವ ಮಳೆ ಕೆಲಸ ಕಾರ್ಯಕ್ಕೆ ತೆರಳುವವರಿಗೆ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಳ್ಳುವವರಿಗೆ ಕಿರಿಕಿರಿ ಉಂಟು ಮಾಡಿದೆ. ಆದರೆ, ಮುಂಗಾರು ಮಳೆ ಅನ್ನದಾತರಲ್ಲಿ ಹುರುಪು ತಂದಿದೆ.