ಹುಬ್ಬಳ್ಳಿ :ವಿಜಯ ದಶಮಿ ದಿನವಾದ ನಿನ್ನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭಕ್ತರು ದೇವಿಯ ದರ್ಶನ ಪಡೆಯಲು ಪರದಾಡುವಂತಾಗಿದೆ.
ಹುಬ್ಬಳ್ಳಿಯಲ್ಲಿ ಮಳೆಯಿಂದಾಗಿ ಚರಂಡಿಯಂತಾದ ದೇವಸ್ಥಾನ ನಗರದ ತುಳಜಾ ಭವಾನಿ ದೇವಸ್ಥಾನದಲ್ಲಿ ಮಳೆಯಿಂದಾಗಿ ಚರಂಡಿ ನೀರು ಹಾಗೂ ಕಸ ತುಂಬಿಕೊಂಡು ಅದರ ಮಧ್ಯೆಯೇ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ವಿಜಯ ದಶಮಿ ಹಾಗೂ ಬನ್ನಿ ಹಬ್ಬದ ನಿಮಿತ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯಲು ಮುಂದಾದರೆ ಇತ್ತ ಮಳೆಯಿಂದಾಗಿ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗಿ, ಗಬ್ಬಾದ ಚರಂಡಿ ನೀರಿನಲ್ಲಿಯೇ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ಮಹಾನಗರ ಪಾಲಿಕೆಯವರು ಸರಿಯಾಗಿ ಚರಂಡಿಗಳನ್ನು ಸ್ವಚ್ಚಮಾಡದೇ ಇರುವುದರಿಂದ ಪ್ಲಾಸ್ಟಿಕ್ ಹಾಗೂ ಕಸ ಕಟ್ಟಿಕೊಂಡು ಒಳಚರಂಡಿ ನೀರು ದೇವಸ್ಥಾನಕ್ಕೆ ನುಗ್ಗಿದ್ದು, ಇದಕ್ಕೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.