ಹುಬ್ಬಳ್ಳಿ:ಕಳೆದ ವಾರ ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಸಾಕಷ್ಟು ಮನೆಗಳು ಧರೆಗುರುಳಿವೆ. ಅದರಲ್ಲೂ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ 6ಕ್ಕೂ ಹೆಚ್ಚು ಮನೆಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಮಳೆ ತಂದ ಆಪತ್ತು: ಮನೆಯೂ ಇಲ್ಲ, ಬೆಳೆಯೂ ಇಲ್ಲದೇ ಕಂಗಾಲಾದ ರೈತಾಪಿ ವರ್ಗ
ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ 6ಕ್ಕೂ ಹೆಚ್ಚು ಮನೆಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಗ್ರಾಮದ ನಿಂಗಪ್ಪ ಬಡಿಗೇರ, ರಾಮಪ್ಪ ಹನುಮಣ್ಣವರ, ಹನುಮಂತಪ್ಪ ಹಾಗೂ ವಿರುಪಾಕ್ಷಪ್ಪ ಹೊರಕೇರಿ ಎಂಬುವವರಿಗೆ ಸೇರಿದ ಮನೆಗಳು ನೆಲಕ್ಕುರುಳಿವೆ.
ಗ್ರಾಮದ ನಿಂಗಪ್ಪ ಬಡಿಗೇರ, ರಾಮಪ್ಪ ಹನುಮಣ್ಣನವರ, ಹನುಮಂತಪ್ಪ ಹಾಗೂ ವಿರೂಪಾಕ್ಷಪ್ಪ ಹೊರಕೇರಿ ಎಂಬುವರಿಗೆ ಸೇರಿದ ಮನೆಗಳು ನೆಲಕ್ಕುರುಳಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಗಳು ಬಿದ್ದು ಕುಟುಂಬಕ್ಕೆ ಬೇರೆ ಆಶ್ರಯವಿಲ್ಲದೇ ಪರದಾಟ ನಡೆಸಿವೆ. ಆದರೆ ಇದುವರೆಗೂ ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಮುಕ್ಕಲ್ ಗ್ರಾ.ಪ ಪಿಡಿಒ ಜಗದೀಶ್ ಎನ್ನುವವರು ಮಾತ್ರ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಪಿಡಿಒ ಬಿಟ್ಟು ಯಾವುದೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಪರಿಶೀಲನೆ ಸಹ ಮಾಡಿಲ್ಲ ಎಂದು ಸಂತ್ರಸ್ತರು ಆರೋಪಿಸುತ್ತಿದ್ದಾರೆ.
ಇನ್ನೊಂದು ಕಡೆ ನಿರಂತರ ಮಳೆಯಿಂದ ತಾಲೂಕಿನಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಗೋವಿನಜೋಳ, ಹೆಸರು ಬೆಳೆ, ಹತ್ತಿ ಬೆಳೆ ನೀರಿನಲ್ಲಿ ನಿಂತು ಕೊಳೆತು ಹೋಗಿವೆ. ಇತ್ತ ಮನೆಯೂ ಇಲ್ಲ, ಬೆಳಯೂ ಇಲ್ಲದೇ ರೈತಾಪಿ ವರ್ಗ ದಿಕ್ಕು ತೋಚದಂತಾಗಿದೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಸಮೀಕ್ಷೆ ನಡೆಯುತ್ತಿದೆ, ಪರಿಹಾರ ವಿತರಣೆ ಆಗುತ್ತದೆ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಹಾಗಾದರೆ ರೈತರ ಬೆನ್ನಿಗೆ ನಿಲ್ಲುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.