ಹುಬ್ಬಳ್ಳಿ: ಜವಾದ್ ಚಂಡಮಾರುತದ ಹಿನ್ನಲೆ ಕೆಲವೊಂದು ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ಡಿಸೆಂಬರ್ 03ರಂದು ರೈಲು ಸಂಖ್ಯೆ 22883 ಪುರಿ - ಯಶವಂತಪುರ ಗರೀಬ್ ರಥ್ ಎಕ್ಸ್ಪ್ರೆಸ್, ರೈಲು ಸಂಖ್ಯೆ 12245 ಹೌರಾ - ಯಶವಂತಪುರ ದುರೊಂತೋ ಎಕ್ಸ್ ಪ್ರೆಸ್, ರೈಲು ಸಂಖ್ಯೆ 22817 ಹೌರಾ - ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12863 ಹೌರಾ - ಯಶವಂತಪುರ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12889 ಟಾಟಾನಗರ - ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
ರೈಲು ಸಂಖ್ಯೆ 12246 ಯಶವಂತಪುರ - ಹೌರಾ ದುರಾಂಟೊ ಎಕ್ಸ್ ಪ್ರೆಸ್, 12246 ಯಶವಂತಪುರ - ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, 18048 ವಾಸ್ಕೋ-ಡ-ಗಾಮಾ - ಹೌರಾ ಅಮರಾವತಿ ಎಕ್ಸ್ ಪ್ರೆಸ್, 18464 ಕೆಎಸ್ಆರ್ ಬೆಂಗಳೂರು - ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್ ಸೇವೆ ರದ್ದಾಗಿದೆ.
ದಿನಾಂಕ 04 ರಂದು ರೈಲು ಸಂಖ್ಯೆ 18463 ಭುವನೇಶ್ವರ - ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್, 18637 ಹಟಿಯಾ - ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ಓದಿ:ಒಮಿಕ್ರೋನ್ ವೈರಸ್: ವೈದ್ಯರು ನೀಡಿರುವ ಸಲಹೆ ಸೂಚನೆಗಳು