ಕರ್ನಾಟಕ

karnataka

ETV Bharat / state

ನಕಲಿ ನೇಮಕಾತಿ ಅಧಿಸೂಚನೆ: ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಎಚ್ಚರಿಕೆ - ಭಾರತೀಯ ರೈಲ್ವೆಯಿಂದ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಕಲಿ ಅಧಿಸೂಚನೆಯನ್ನು ಹೊರಡಿಸಿರುವುದು ಬೆಳಕಿಗೆ ಬಂದಿದ್ದು, ಇಂಥವರಿಂದ ಜಾಗೃತರಾಗಿರಿ ಎಂದು ರೈಲ್ವೆ ಇಲಾಖೆ ಉದ್ಯೋಗಾಕಾಂಕ್ಷಿಗಳಲ್ಲಿ ಮನವಿ ಮಾಡಿದೆ.

north-eastern-railway-fake-recruitment-notification
ರೈಲ್ವೆ ನೇಮಕಾತಿಗೆ ನಕಲಿ ಅಧಿಸೂಚನೆ: ಜಾಗೃತರಾಗಿರಲು ರೈಲ್ವೆ ಇಲಾಖೆ ಸೂಚನೆ

By

Published : May 4, 2022, 8:55 AM IST

ಹುಬ್ಬಳ್ಳಿ:ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿಯ ಹಗರಣ ಹೊರಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಕಲಿ ಅಧಿಸೂಚನೆ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಂಥವರಿಂದ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.‌ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿ ಉಂಟುಮಾಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತಿದೆ.

ನೈರುತ್ಯ ರೈಲ್ವೆ ವಲಯದ ಜಿಎಂ ವ್ಯಾಪ್ತಿಯಲ್ಲಿ (ಮಹಾಪ್ರಬಂಧಕರು) ಕೋಟಾದಡಿ ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ 2,800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಮಾಡಬಾರದು ಎಂದು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ರೀತಿಯ ಹಲವಾರು ನಿಯಮಗಳನ್ನು ಸೇರಿದಂತೆ ವಿವಿಧ ಸೂಚನೆಗಳುಳ್ಳ ಪತ್ರ ಇದೀಗ ಎಲ್ಲೆಡೆ ಹರಿದಾಡುತ್ತಿವೆ.


ಸಾರ್ವಜನಿಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬಾರದೆಂದು ಇಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಹೀಗೆ ಜಿಎಂ ಕೋಟಾದಡಿ ಹೊರಡಿಸಿರುವ ನೋಟಿಫಿಕೇಶನ್ ಜಿಎಂ‌ ಸಹಿ ಹಾಗೂ ಸೀಲುಗಳನ್ನ ಸಹ‌ ನಕಲು ಮಾಡಲಾಗಿದೆ. ಆದರೆ ಈ ರೀತಿ ಪತ್ರ, ನೋಟಿಫಿಕೇಶನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿರುದ್ಯೋಗಿಗಳನ್ನು ನಂಬಿಸಿ ದುಡ್ಡು ವಸೂಲಿ ಮಾಡುವ ಜಾಲ ಇದರ ಹಿಂದೆ ಇದೆ. ಹೀಗಾಗಿ ಇದನ್ನು ಯಾರೂ ನಂಬಬಾರದು ಎಂದು ರೈಲ್ವೆ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ:ಜೋಧ್​ಪುರ ಹಿಂಸಾಚಾರ: ಗಲಭೆ, ಗಾಯ, ಬಂಧನ, ಆರೋಪ-ಪ್ರತ್ಯಾರೋಪ! ಕಂಪ್ಲೀಟ್ ಡಿಟೇಲ್ಸ್‌

ABOUT THE AUTHOR

...view details