ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಹಣವನ್ನು ಪತ್ತೆಹಚ್ಚಿ ಹಣವನ್ನು ಹಿಂದಿರುಗಿಸುವ ಮೂಲಕ ನೈಋತ್ಯ ರೈಲ್ವೆ ವಲಯದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ರೈಲು ಸಂಖ್ಯೆ 12614ರಲ್ಲಿ ಕೆಲಸ ಮಾಡುತ್ತಿರುವ ಸೌತ್ ವೆಸ್ಟರ್ನ್ ರೈಲ್ವೆಯ ಎಸಿ ಮೆಕ್ಯಾನಿಕ್ ಅಕ್ಬರ್ ಹುಸೇನ್ ಮತ್ತು ಕೆಎಸ್ಆರ್ ಬೆಂಗಳೂರು - ಮೈಸೂರು ಟಿಪ್ಪು ಎಕ್ಸ್‌ಪ್ರೆಸ್ ಶಂಕರ ಎಂಬುವವರೇ ಪ್ರಾಮಾಣಿಕತೆ ಮೆರೆದಿರುವ ಸಿಬ್ಬಂದಿ.
ಟಿ.ಜೈನ್ ಎನ್ನುವ ವ್ಯಕ್ತಿ 50,000 ರೂಪಾಯಿಗಳನ್ನು ರೈಲಿನಲ್ಲಿ ಕಳೆದುಕೊಂಡಿದ್ದರು. ಈ ಹಣ ಸಿಬ್ಬಂದಿಗೆ ಸಿಕಿದ್ದು, ಸಿಬ್ಬಂದಿ ಗುಡಗೇರಿ ಎನ್ನುವ ರೈಲ್ವೆ ಅಧಿಕಾರಿಯನ್ನು ಸಂಪರ್ಕಿಸಿ ಪ್ರಯಾಣಿಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪತ್ತೆ ಮಾಡುವ ಮೂಲಕ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸಿಬ್ಬಂದಿ ಕಾರ್ಯಕ್ಕೆ ಟಿ.ಜೈನ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ರೈಲ್ವೆ ಇಲಾಖೆ ಸಿಬ್ಬಂದಿ ಪ್ರಾಮಾಣಿಕ ಕಾರ್ಯಕ್ಕೆ ರೈಲ್ವೆ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗಿದೆ.