ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲಾ ಕಾಂಗ್ರೆಸ್​​​ ಕಾರ್ಯದರ್ಶಿಯ ಕ್ಯಾಸಿನೋ ಉದ್ಘಾಟಿಸಿದ್ದ ನಟಿ ರಾಗಿಣಿ - ವಿಡಿಯೋ - Dharwad news

ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯ ಕ್ಯಾಸಿನೋ ಓಪನಿಂಗ್​​ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಭಾಗಿಯಾಗಿದ್ದ ಕಾರಣ ಕಾರ್ಯದರ್ಶಿ ಗಿರೀಶ್​ ಗದಿಗೆಪ್ಪಗೌಡ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ನಟಿ ರಾಗಿಣಿ ಭಾಗಿಯಾಗಿದ್ದ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ragini-invited-for-casino-opening-in-goa-by-congress-leader
ಕಾಂಗ್ರೆಸ್​​​ ಜಿಲ್ಲಾ ಕಾರ್ಯದರ್ಶಿಯ ಕ್ಯಾಸಿನೋ ಓಪನಿಂಗ್ ಮಾಡಿದ್ದ ನಟಿ ರಾಗಿಣಿ: ವಿಡಿಯೋ

By

Published : Sep 14, 2020, 12:58 PM IST

ಹುಬ್ಬಳ್ಳಿ:ಸ್ಯಾಂಡಲ್​​​​ವುಡ್​ ಡ್ರಗ್ಸ್‌ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ‌ ರಾಗಿಣಿ‌ ಜೊತೆ ಸಂಪರ್ಕ ಹೊಂದಿದ್ದ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರನ್ನು ಸಿಸಿಬಿ‌ ಅಧಿಕಾರಿಗಳು ವಶಕ್ಕೆ ‌ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕ್ಯಾಸಿನೋ ಓಪನಿಂಗ್ ಮಾಡಿದ್ದ ನಟಿ ರಾಗಿಣಿ

ಗಿರೀಶ್ ಗದಿಗೆಪ್ಪಗೌಡ ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ನಟಿ ರಾಗಿಣಿ ಕೈಯಿಂದ ಕ್ಯಾಸಿನೋ ಓಪನಿಂಗ್ ಮಾಡಿಸಿದ್ದರು. ಇದೇ ಮಾರ್ಚ್​​​ನಲ್ಲಿ ಪಣಜಿಯಲ್ಲಿರುವ ಕಾಡಿಲಾಕ್ ಕ್ಯಾಸಿನೋ ಉದ್ಘಾಡಿಸಿದ್ದರು. ಈ ಹಿನ್ನೆಲೆ ಕಾಂಗ್ರೆಸ್​ ಮುಖಂಡನನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಕ್ಯಾಸಿನೋ ಓಪನಿಂಗ್ ಮಾಡಿದ್ದ ನಟಿ ರಾಗಿಣಿ

ಡ್ರಗ್ಸ್​ ಲಿಂಕ್ ಆರೋಪದಡಿ ನಟಿ ರಾಗಿಣಿ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಕ್ಯಾಸಿನೋ ಓಪನಿಂಗ್​​​​ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲಿಟ್​ ಮಾಡಲಾಗಿತ್ತು. ಆದರೆ ರಾಗಿಣಿ ಜೊತೆ ಕಾಣಿಸಿಕೊಂಡ ಗಿರೀಶ್ ಗದಿಗೆಪ್ಪಗೌಡ ಅವರ ವಿಡಿಯೋ ಈಗ ಲಭ್ಯವಾಗಿದೆ.

ಕ್ಯಾಸಿನೋ ಓಪನಿಂಗ್ ಮಾಡಿದ್ದ ನಟಿ ರಾಗಿಣಿ

ಕ್ಯಾಸಿನೋ ಉದ್ಘಾಟನೆಗೆ ಆಗಮಿಸಿದ್ದ ನಟಿ ರಾಗಿಣಿ ಜೊತೆಗಿನ ವಿಡಿಯೋ ತುಣುಕುಗಳು ಈಟಿವಿ ಭಾರತಕ್ಕೆ ಲಭ್ಯವಾಗಿವೆ.

ABOUT THE AUTHOR

...view details