ಹುಬ್ಬಳ್ಳಿ: ರಾಜ್ಯ ಸರ್ಕಾರದ ಅನುದಾನದ ಕೊರತೆ ಹಿನ್ನೆಲೆ ಪೊಲೀಸರಿಗೆ ವೇತನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹು - ಧಾ ಪೊಲೀಸ್ ಕಮೀಷನರ್ ಆರ್. ದಿಲೀಪ್ ಎಲ್ಲ ಪೊಲೀಸ್ ಠಾಣೆಗಳಿಗೆ ಫ್ಯಾಕ್ಸ್ ಕಳುಹಿಸಿದ್ದಾರೆ.
ಸರ್ಕಾರದಲ್ಲಿ ಅನುದಾನದ ಕೊರತೆ: ಪೊಲೀಸರಿಗೆ ವೇತನ ವಿಳಂಬವಾಗೋ ಸಾಧ್ಯತೆ - Hubli, Dharwad Police Commissioner R. dilip
ರಾಜ್ಯ ಸರ್ಕಾರದ ಅನುದಾನದ ಕೊರತೆ ಹಿನ್ನೆಲೆಯಲ್ಲಿ ಪೊಲೀಸರಿಗೆ ವೇತನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರ್ ಸಿಬ್ಬಂದಿಗೆ ಪತ್ರ ಬರೆದಿದ್ದಾರೆ.
ಹು-ಧಾ ಪೊಲೀಸ್ ಕಮೀಷನರ್ ಆರ್. ದಿಲೀಪ್
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಈ ಸನ್ನಿವೇಶ ಉದ್ಭವವಾಗಿದೆ. ಫೆಬ್ರವರಿ ತಿಂಗಳ ಸಂಬಳ ಅನುದಾನದ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಇಂದು ನಡೆಯುವ ಬ್ರೀಪ್ ಮಿಟಿಂಗ್‌ನಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ವಿಳಂಬವಾಗುವ ಬಗ್ಗೆ ಗಮನಕ್ಕೆ ತರಲು ಡಿಸಿಪಿ, ಎಸಿಪಿ ಮತ್ತು ಪಿಐಗಳಿಗೆ ಪೊಲೀಸ್ ಆಯುಕ್ತರು ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಿದ್ದಾರೆ.
Last Updated : Mar 7, 2020, 2:08 PM IST