ಹುಬ್ಬಳ್ಳಿ: ಮನೆ ಕಟ್ಟುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಬ್ಬಳ್ಳಿ ಗಣೇಶಪೇಟ್ನಲ್ಲಿ ನಡೆದಿದೆ.
2 ಕುಟುಂಬಗಳ ನಡುವೆ ಗಲಾಟೆ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಗಂಭೀರಗಾಯಗಳಾಗಿದೆ.
ನಗರದ ಗಣೇಶ ಪೇಟ್ನಲ್ಲಿ ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಯಾಸೀರ್ ಫಾರೂಖ್ ಶಿರಹಟ್ಟಿ ಹಾಗೂ ಸಹೋದರರು ಸೇರಿಕೊಂಡು ವಸೀಂ ಇಲಿಯಾಕತ್ ಮಕಾಂದರ್ ಯುವಕನಿಗೆ ಸಲಾಕೆ ಹಾಗೂ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹಲ್ಲೆಗೊಳ್ಳಗಾದ ವಸೀಂ ಮುಖಕ್ಕೆ 27 ಹೊಲಿಗೆ ಬಿದ್ದಿದ್ದು, ದೇಹದಲ್ಲಿ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯಾಸೀನ್ ಶಿರಹಟ್ಟಿ ಸಹೋದರರನ್ನು ಕೂಡಲೇ ಬಂಧಿಸುವಂತೆ ವಸೀಂ ಮಕಾಂದರ್ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.