ಹುಬ್ಬಳ್ಳಿ: ಪದೆಪದೇ ಮನೆಯಿಂದ ಹೊರ ಬರಬೇಡಿ ಎಂದ ಪೊಲೀಸರ ಜೊತೆಗೆ ಸೀಲ್ಡೌನ್ಗೆ ಒಳಗಾದ ಮನೆಯವರು ಅನುಚಿತವಾಗಿ ವರ್ತಿಸಿದ ಘಟನೆ ಹಳೇ ಅರವಿಂದ ನಗರದಲ್ಲಿ ನಡೆದಿದೆ.
ಸೀಲ್ಡೌನ್ಗೊಳಗಾದ ಮನೆಯವರು, ಪೊಲೀಸರ ನಡುವೆ ಮಾತಿನ ಚಕಮಕಿ
ಸೀಲ್ಡೌನ್ಗೆ ಒಳಗಾದ ಕುಟುಂಬ ಸದಸ್ಯರು ಬೇಕಾಬಿಟ್ಟಿಯಾಗಿ ಮನೆಯಿಂದ ಹೊರ ಬರುತ್ತಿದ್ದ ಕಾರಣ, ಅದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ಮನೆಯವರು ಜಗಳಕ್ಕೆ ಇಳಿದಿದ್ದಾರೆ.
ಮಾತಿನ ಚಕಮಕಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎದುರು ಮನೆಯೊಂದನ್ನು ಸೀಲ್ಡೌನ್ ಮಾಡಲಾಗಿದೆ. ಆದರೂ ಆ ಮನೆಯವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಅದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.